ಮತ್ತೆ ಸಿನಿಮಾದಲ್ಲಿ ಬ್ಯುಸಿಯಾದ ಶಿವರಾಜ್ ಕುಮಾರ್: ಮುಂದಿನ ಚಿತ್ರ ಯಾವುದು?
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ವೇದ’ ಸಿನಿಮಾದ ಸೂಪರ್ ಸಕ್ಸಸ್ ನಂತರ ಕನ್ನಡ– ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇತ್ತೀಚಿಗೆ ಅನೌನ್ಸ್ ಮಾಡಿದ್ದ ‘ಬೈರತಿ ರಣಗಲ್’ ನರ್ತನ್ ನಿರ್ದೇಶನದ ‘ಮಫ್ತಿ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಶೇಕ್ ಆಗಿತ್ತು. ಈ ಚಿತ್ರದ ಪ್ರೀಕ್ವೆಲ್‌ಗೆ ಸಿದ್ಧತೆ ಭರದಿಂದ ಸಾಗುತ್ತಿದೆ. 5 ವರ್ಷಗಳ ನಂತರ ಈ ಚಿತ್ರದ ಮೂಲಕ ಮತ್ತೆ ನರ್ತನ್- ಶಿವಣ್ಣ ಜೋಡಿಒಂದಾಗುತ್ತಿದೆ.
‘ಮಫ್ತಿ’ ಚಿತ್ರದಲ್ಲಿ ಮಾಫಿಯಾ ಡಾನ್ ‘ಬೈರತಿ ರಣಗಲ್ ಅವತಾರದಲ್ಲಿ ಶಿವಣ್ಣ ಅಬ್ಬರಿಸಿ ರಾಕ್ಷಸನಂತಹ ಪಾತ್ರ ಕುತೂಹಲ ಕೆರಳಿಸಿತ್ತು. ಆದರೆ ಆತ ನಿಜಕ್ಕೂ ಅಷ್ಟು ಕ್ರೂರಿ ಆಗಿದ್ದು ಏಕೆ? ಆತನ ಹಿನ್ನೆಲೆ ಏನು ಎನ್ನುವ ಕಥೆ ಈ ಭಾಗದಲ್ಲಿ ರಿವೀಲ್ ಆಗಲಿದೆ.
ಸದ್ಯ ಚಿತ್ರತಂಡ ನಾಯಕಿಯ ಹುಡುಕಾಟ ನಡೆಸುತ್ತಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ನಾಯಕಿ ಸಿಕ್ಕಿದ ಕೂಡಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಬೈರತಿ ರಣಗಲ್ ಜೋಡಿ ಯಾರಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
ಶಿವಣ್ಣ ಆರೇಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನರ್ತನ್ ರಾಮ್ ಚರಣ್ ಜೊತೆ ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ ಬೈರತಿ ರಣಗಲ್ ಕೆಲಸ ಕೂಡ ನಡೆಯುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw