ಗ್ಯಾಸ್ ಸಿಲಿಂಡರ್ ತಲೆ ಮೇಲೆ ಹೊತ್ತುಕೊಂಡು ಓಡಾಡುತ್ತಿದ್ದ ಶೋಭಾ ಕರಂದ್ಲಾಜೆ ಇಗೆಲ್ಲಿದ್ದಾರಪ್ಪಾ? | ಸಿದ್ದರಾಮಯ್ಯ ಪ್ರಶ್ನೆ - Mahanayaka

ಗ್ಯಾಸ್ ಸಿಲಿಂಡರ್ ತಲೆ ಮೇಲೆ ಹೊತ್ತುಕೊಂಡು ಓಡಾಡುತ್ತಿದ್ದ ಶೋಭಾ ಕರಂದ್ಲಾಜೆ ಇಗೆಲ್ಲಿದ್ದಾರಪ್ಪಾ? | ಸಿದ್ದರಾಮಯ್ಯ ಪ್ರಶ್ನೆ

siddaramaiha vs shobha
13/09/2021

ಬೆಂಗಳೂರು: ಗ್ಯಾಸ್ ಬೆಲೆ ಏರಿಕೆ ಆಗಿದೆ ಅಂತ ತಲೆ ಮೇಲೆ ಸಿಲಿಂಡರ್ ಎತ್ತಿಕೊಂಡು ಹೋಗುತ್ತಿದ್ದ  ಶೋಭಾ ಕರಂದ್ಲಾಜೆ ಈಗ ಎಲ್ಲಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ, ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿ ಈಗ ಇದ್ದಾರೆ, ಬೆಲೆ ಏರಿಕೆ ವಿರೋಧಿಸಿ ರಾಜೀನಾಮೆ ನೀಡುತ್ತಾರಾ? ಎಂದು ಪ್ರಶ್ನಿಸಿದರು.

ಬೆಲೆ ಏರಿಕೆ ವಿರುದ್ಧ ಮಾತನಾಡಿದ ಸಿದ್ದರಾಮಯ್ಯ, ಸಂಸದೆ ಶೋಭಾ ಕರಂದ್ಲಾಜೆ ಅವರ ಹೆಸರನ್ನು ಪ್ರಸ್ತಾಪಿಸಿ, ಆಗ ಬೆಲೆ ಏರಿಕೆಯಾಗಿದೆ, ಅನ್ಯಾಯ ಆಗಿದೆ ಎಂದು ಶೋಭಾ ಕರಂದ್ಲಾಜೆ ತಲೆ ಮೇಲೆ ಸಿಲಿಂಡರ್ ಹೊತ್ತುಕೊಂಡು ಪ್ರತಿಭಟನೆ ಮಾಡಿದ್ದರು. ಈಗ ಎಲ್ಲಿದ್ದಾರೆ? ಜವಾಬ್ದಾರಿಯುತ ಸ್ಥಾನದಲ್ಲಿ ಇರುವುದು ಎಂದರೆ, ಜವಾಬ್ದಾರಿಯನ್ನು ಮರೆತು ಬಿಡುವುದೇ? ಎಂದು ಪ್ರಶ್ನಿಸಿದ ಅವರು, ಬೆಲೆ ಏರಿಕೆ ವಿರುದ್ಧ ರಾಜೀನಾಮೆ ನೀಡಲಿ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ತೀವ್ರ ಪ್ರತಿಭಟನೆ ಆರಂಭಿಸಿದೆ. ಈ ನಡುವೆ ಕಾಂಗ್ರೆಸ್ ಸರ್ಕಾರ ಇರುವಾಗ ಬೆಲೆ ಏರಿಕೆಯ ವಿರುದ್ಧ ಪ್ರತಿಭಟಿಸಿದ್ದ ಬಿಜೆಪಿ ನಾಯಕರು ಈಗ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತರಾಟೆಗೆತ್ತಿಕೊಳ್ಳುತ್ತಿದ್ದಾರೆ. ಇಂದು ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಎತ್ತಿನ ಗಾಡಿ ಸವಾರಿ ಮಾಡಿದ್ದಾರೆ. ಈ ನಡುವೆ ಸಿದ್ದರಾಮಯ್ಯನವರು ಸಚಿವೆ ಶೋಭಾ ಕರಂದ್ಲಾಜೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇನ್ನಷ್ಟು ಸುದ್ದಿಗಳು…

“ಮಗಳನ್ನು ಹೇಗಾದರೂ ಬದುಕಿಸಿ” ಎಂದು ಅತ್ತು ಗೋಗರೆದರೂ ಬಾಗಿಲು ತೆರೆಯದ ಆಸ್ಪತ್ರೆ | 5 ವರ್ಷದ ಬಾಲಕಿ ಸಾವು

ಎತ್ತಿನಗಾಡಿಯಿಂದ ಕೆಳಕ್ಕೆ ಉರುಳಿದ ಕಾಂಗ್ರೆಸ್ ನಾಯಕರು

ಕಾಂಗ್ರೆಸ್ ನ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ನಿಧನ

ಪ್ರಾಣ ಸ್ನೇಹಿತರು ಜೊತೆಯಾಗಿ ಪ್ರಾಣ ಬಿಟ್ಟರು: ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದು ಪ್ರಾಣಕ್ಕೆ ಕುತ್ತು ತಂದಿತು!

ಜಾತಿ ಜನಗಣತಿ ಸಮೀಕ್ಷೆಯನ್ನು ಕೊಂದದ್ದು ಸಿದ್ದರಾಮಯ್ಯ, ಹೂತದ್ದು ಡಿ.ಕೆ.ಶಿವಕುಮಾರ್ | ಕೆ.ಎಸ್.ಈಶ್ವರಪ್ಪ

ಅಡಿಕೆ ಬೇಯಿಸುವ ಹಂಡೆಗೆ ಬಿದ್ದು ನಾಲ್ಕು ವರ್ಷ ವಯಸ್ಸಿನ ಬಾಲಕನ ದಾರುಣ ಸಾವು!

ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸಿ, ಅಂಗಾಂಗ ಮುಟ್ಟಿ ವಿಕೃತವಾಗಿ ಥಳಿಸಿದ ತಂಡ: ವಿಡಿಯೋ ವೈರಲ್

ಬಿರಿಯಾನಿ ತಿಂದ ಕೆಲವೇ ಹೊತ್ತಿನಲ್ಲಿ ಬಾಲಕಿ ಸಾವು: 15 ದಿನಗಳ ಹಳೆಯ ಕೋಳಿ ಮಾಂಸದಲ್ಲಿ ಬಿರಿಯಾನಿ ತಯಾರಿಕೆ!

ಮುಂಬೈ: ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ!

ಇತ್ತೀಚಿನ ಸುದ್ದಿ