Shobitha Shivanna: ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಸಾವಿಗೆ ಶರಣು!
ಬೆಂಗಳೂರು: ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಶಿವಣ್ಣ(Shobitha Shivanna) ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದ್ದು, ಹೈದರಾಬಾದ್ ನಲ್ಲಿ ಅವರು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಶೋಭಿತಾ ಮದುವೆಯ ನಂತರ ಹೈದರಾಬಾದ್ ನಲ್ಲಿ ವಾಸವಿದ್ದರು. ಸದ್ಯ ಮಗಳ ಸಾವಿನ ಸುದ್ದಿ ಕೇಳಿ ಶೋಭಿತಾ ಕುಟುಂಬಸ್ಥರು ಹೈದರಾಬಾದ್ ಗೆ ತೆರಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೂಲತಃ ಸಕಲೇಶಪುರದ ಶೋಭಿತಾ ಶಿವಣ್ಣ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ವಿಲನ್ ಪಾತ್ರಧಾರಿಯಾಗಿ ನಟಿಸಿದ್ದರು. ಮೀನಾಕ್ಷಿ ಮದುವೆ, ಕೋಗಿಲೆ, ಗಾಳಿಪಟ, ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಧಾರವಾಹಿಗಳಲ್ಲೂ ನಟಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಕೂಡ ಹಂಚಿಕೊಂಡಿದ್ದರು. ಮದುವೆಯ ನಂತರ ಶೋಭಿತಾ ಇಂಡಸ್ಟ್ರಿಯಿಂದ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿದೆ.
ಸದ್ಯ ನಟಿಯ ಸಾವಿಗೆ ಕಾರಣ ಏನು ಎನ್ನುವ ಮಾಹಿತಿ ಲಭ್ಯವಾಗಿಲ್ಲ, ನಿನ್ನೆ ರಾತ್ರಿ ಅವರು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: