ಪನ್ನೀರ್ ಪ್ರಿಯರಿಗೆ ಶಾಕ್: ಬ್ಯಾಕ್ಟೀರಿಯಾ ಅಂಶಗಳು ಪತ್ತೆ

26/03/2025
ಬೆಂಗಳೂರು: ಆಹಾರ ಇಲಾಖೆ ಪನ್ನೀರ್ ಸೇರಿ ಇತರೆ ಆಹಾರ ಉತ್ಪನ್ನಗಳ ಸ್ಯಾಂಪಲ್ ಪಡೆದು ಟೆಸ್ಟ್ಗೆ ಒಳಪಡಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ಪನ್ನೀರ್ ನಲ್ಲಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿರುವುದು ದೃಢವಾಗಿದೆ.
ಆಹಾರ ಗುಣಮಟ್ಟ ಇಲಾಖೆಯಿಂದ ಪನೀರ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಇದರ ವರದಿಯಲ್ಲಿ ಪನ್ನೀರ್ ನಲ್ಲಿ ಅಸುರಕ್ಷಿತ ಅಂಶ ಇರೋದು ಪತ್ತೆ ಆಗಿದೆ.
231 ಪನೀರ್ ಸ್ಯಾಂಪಲ್ ಪೈಕಿ 17 ಸ್ಯಾಂಪಲ್ ಗಳ ವರದಿ ಬಂದಿದೆ. 17 ಸ್ಯಾಂಪಲ್ ಲ್ಯಾಬ್ ರಿಪೋರ್ಟ್ನಲ್ಲಿ 2 ಅನ್ ಸೇಫ್ ಎಂದು ವರದಿ ಬಂದಿದ್ದು, ಪನ್ನೀರ್ ನಲ್ಲಿ ಬ್ಯಾಕ್ಟೀರಿಯಾ ಅಂಶ ಇರೋದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7