ಶಾಕಿಂಗ್ ನ್ಯೂಸ್: ರೇಬಿಸ್ ವೈರಸ್ ಗೆ ಕಾಲೇಜು ವಿದ್ಯಾರ್ಥಿನಿ ಬಲಿ
ಕಡಬ: ರೇಬಿಸ್ ವೈರಸ್ ನಿಂದ ಕಾಲೇಜು ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಆಲಂಕಾರು ಗ್ರಾಮದಲ್ಲಿ ನಡೆದಿದ್ದು, ಅನಾರೋಗ್ಯ ಹಿನ್ನೆಲೆಯಲ್ಲಿ ಅಸ್ವಸ್ಥಳಾಗಿದ್ದ ವಿದ್ಯಾರ್ಥಿನಿಯನ್ನು ಮಂಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಕೆದಿಲ ವರ್ಗೀಸ್ ಎಂಬವರ ಪುತ್ರಿ 17 ವರ್ಷ ವಯಸ್ಸಿನ ವಿನ್ಸಿ ಮೃತಪಟ್ಟ ಬಾಲಕಿ ಎಂದು ತಿಳಿದು ಬಂದಿದೆ. ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಬಾಲಕಿಗೆ ಗುರುವಾರ ಬೆಳಗ್ಗೆ ಏಕಾಏಕಿ ತಲೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಸ್ಥಳೀಯ ಆಸ್ಪತ್ರೆಯಿಂದ ಔಷಧಿ ತಂದು ನೀಡಲಾಗಿತ್ತು.
ಸಂಜೆಯಾದರೂ ಬಾಲಕಿಯ ತಲೆ ನೋವು ನಿಲ್ಲಲಿಲ್ಲ. ಅದರ ಬದಲು ತಲೆ ನೋವು ಉಲ್ಬಣಗೊಂಡಿತ್ತು. ಇದರಿಂದಾಗಿ ತಕ್ಷಣವೇ ಆಕೆಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ವಿನ್ಸಿ ತಡರಾತ್ರಿ ಕೊನೆಯುಸಿರೆಳೆದಿದ್ದಾಳೆ.
ನಾಲ್ಕು ತಿಂಗಳ ಹಿಂದೆ ಇಲ್ಲಿನ ಅಲಂಕಾರು ಪೇಟೆ ಸೇರಿದಂತೆ ಮೃತ ಬಾಲಕಿಯ ಮನೆಯ ಸುತ್ತಮುತ್ತ ಹುಚ್ಚುನಾಯಿ ಕಾಣಿಸಿಕೊಂಡಿತ್ತು. ಈ ಸಂದರ್ಭ ಆಲಂಕಾರು ಪೇಟೆಯಲ್ಲಿ ಬೀದಿ ನಾಯಿಗಳಿಗೆ ಹುಚ್ಚುನಾಯಿ ಕಡಿದಿತ್ತು ಎನ್ನಲಾಗಿದೆ. ವಿನ್ಸಿ ಮನೆಯ ಸಾಕು ನಾಯಿ ಕೂಡ ಕೆಲವು ದಿನಗಳ ಹಿಂದೆ ರೇಬಿಸ್ ಗೆ ಒಳಗಾಗಿ ಸಾವಿಗೀಡಾಗಿತ್ತು. ನಾಯಿಯಿಂದ ವಿದ್ಯಾರ್ಥಿಗೂ ರೇಬಿಸ್ ತಗುಲಿರಬಹುದು ಎನ್ನುವ ಶಂಕೆ ಮೂಡಿದೆ.
2018ರಲ್ಲಿ ವಿನ್ಸಿಯ ಅಣ್ಣ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದ. ಆ ಬಳಿಕ ಇದೀಗ ವಿನ್ಸಿ ಕೂಡ ರೇಬಿಸ್ ಗೆ ಬಲಿಯಾಗಿದ್ದಾಳೆ. ಇದೀಗ ವಿನ್ಸಿಯ ತಂದೆ ತಾಯಿ ತಮ್ಮಿಬ್ಬರು ಮಕ್ಕಳನ್ನೂ ಕಳೆದುಕೊಂಡಿದ್ದಾರೆ. ಅವರ ಮನೆಯಲ್ಲಿ ದುಃಖ ಮಡುಗಟ್ಟಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ಮಂಗಳೂರು: ಹೆಡ್ ಕಾನ್ ಸ್ಟೇಬಲ್ ಸಿದ್ಧಾರ್ಥ್ ಜೆ. ಹೃದಯಾಘಾತದಿಂದ ನಿಧನ
ಅಸ್ಪೃಶ್ಯತೆಯನ್ನು ಮುಚ್ಚಿಟ್ಟು ಮತಾಂತರದ ಹಿಂದೆ ಬಿದ್ದ ಬಿಜೆಪಿ ಪರಿವಾರ!
ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ ‘ಜೈ ಭೀಮ್’ ಬಹುನಿರೀಕ್ಷಿತ ಚಿತ್ರ
ವಾಹನ ಚಲಾಯಿಸುತ್ತಿರುವ ವೇಳೆ ಹೆಡ್ ಫೋನ್, ಬ್ಲೂಟೂತ್ ಬಳಸಿದರೆ ದಂಡ ಖಚಿತ
ಪರೀಕ್ಷೆ ಮುಗಿಸಿ ಹೊರ ಬಂದ ಸಹಪಾಠಿಯ ಕತ್ತು ಸೀಳಿ ಕೊಂದ ಪ್ರೇಮಿ!
ಕ್ಲಾಸ್ ನಲ್ಲಿ ಗಲಾಟೆ ಮಾಡಿದ ವಿದ್ಯಾರ್ಥಿಯ ಕಣ್ಣಿಗೆ ಪೆನ್ ಎಸೆದ ಶಿಕ್ಷಕಿಗೆ ಜೈಲು!
ಸುಳ್ಯ: ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯಿಂದ ಅಂಬೇಡ್ಕರ್ ಅವರ ಜೀವನ ಕುರಿತ ಹಾಡು ಬಿಡುಗಡೆ