ನಾಯಿಯನ್ನು ಅಟ್ಟಿಸಿಕೊಂಡು ಬಂದು ಶೌಚಾಲಯದಲ್ಲಿ ಬಂಧಿಯಾದ ಚಿರತೆ | ಮುಂದೇನಾಯ್ತು? - Mahanayaka

ನಾಯಿಯನ್ನು ಅಟ್ಟಿಸಿಕೊಂಡು ಬಂದು ಶೌಚಾಲಯದಲ್ಲಿ ಬಂಧಿಯಾದ ಚಿರತೆ | ಮುಂದೇನಾಯ್ತು?

03/02/2021

ಕಡಬ: ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ಮನೆಯ ಶೌಚಾಲಯದಲ್ಲಿ ಬಂಧಿಯಾದ ಘಟನೆ ಬುಧವಾರ ಕಡಬದ ಬಿಳಿನೆಲೆಯ ಕೈಕಂಬದ ಮೂಲೆ ಮನೆ ಎಂಬಲ್ಲಿ ನಡೆದಿದ್ದು, ಶೌಚಾಲಯದೊಳಗೆ ಬಂದರೂ ಚಿರತೆ ನಾಯಿಗೆ ಏನೂ ಹಾನಿ ಮಾಡದೇ ಮೂಲೆಯಲ್ಲಿ ಕುಳಿತುಕೊಂಡಿದೆ.


Provided by

ರೇಗಪ್ಪ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ಚಿರತೆ ನಾಯಿಯನ್ನು ಓಡಿಸಿಕೊಂಡು ಬಂದಿದೆ. ಈ ವೇಳೆ ನಾಯಿ ಪ್ರಾಣ ಉಳಿಸಿಕೊಳ್ಳಲು ಶೌಚಾಲಯದೊಳಗೆ ನುಗ್ಗಿದೆ. ನಾಯಿ ಜೊತೆಗೆ ಚಿರತೆ ಕೂಡ ನುಗ್ಗಿದೆ. ಇದನ್ನು ಗಮನಿಸಿದ ಮನೆಯವರು ಶೌಚಾಲಯದ ಬಾಗಿಲು ಹಾಕಿದ್ದರೆ. ಇದರಿಂದಾಗಿ ಚಿರತೆ ಶೌಚಾಲಯದಲ್ಲಿಯೇ ಬಂಧಿಯಾಗಿದೆ.

ತಕ್ಷಣವೇ ಸ್ಥಳೀಯರು ಅರಣ್ಯಾಧಿಕಾರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು  ಚಿರತೆಗೆ ಅರಿವಳಿಕೆ ನೀಡಿ ಚಿರತೆಯನ್ನು ಬಂಧಿಸಲು ಸಿದ್ಧತೆ ನಡೆಸುತ್ತಿದ್ದು, ಈ ವೇಳೆ ಚಿರತೆಯು ತಪ್ಪಿಸಿಕೊಂಡು ಪರಾರಿಯಾಗಿದೆ.

ಕೈಗೆ ಸಿಕ್ಕಿದ್ದ ಚಿರತೆಯನ್ನು ಪರಾರಿಯಾಗಲು ಬಿಟ್ಟ ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಅಧಿಕಾರಿಗಳ  ಬಳಿಯಲ್ಲಿ ಏರ್ ಗನ್ ಇದ್ದರೂ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಅರಿವಳಿಕೆ ಮದ್ದು ಯಾವುದು ಎನ್ನುವ ಬಗ್ಗೆ ಅವರಲ್ಲಿಯೇ ಗೊಂದಲ ಇತ್ತು. ಸಿದ್ಧತೆಯೇ ಇಲ್ಲದೇ ಅವರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ