80 ಕೋಟಿ ಬಡವರ ಖಾತೆಗೆ ಕನ್ನ | ಶ್ರೀಕೃಷ್ಣನ ಮೇಲೆ ಮತ್ತೊಂದು ಗಂಭೀರ ಆರೋಪ
ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣನ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು, ಕೇವಲ ಶ್ರೀಮಂತರ ಖಾತೆಗೆ ಮಾತ್ರ ಈತ ಕನ್ನ ಹಾಕಿಲ್ಲ. ಬರೊಬ್ಬರಿ 80 ಕೋಟಿ ಕಡುಬಡವರ ಖಾತೆಗೆ ಕನ್ನ ಹಾಕಿ ಹಣ ಯಾಮಾರಿಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
ವರದಿಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದು ಬಂದಿದ್ದು, ಈ ಪತ್ರದಲ್ಲಿ ತಿಳಿಸಿರುವಂತೆ, ಬಡವರ ಖಾತೆಗೆ ಕೈ ಹಾಕಿ ಪ್ರತಿಯೊಬ್ಬರ ಅಕೌಂಟ್ ನಿಂದ ಪ್ರತಿ ತಿಂಗಳು ಎರಡೆರಡು ರೂಪಾಯಿ ಹಣವನ್ನು ಈತ ಕದಿಯುತ್ತಿದ್ದ ಹೀಗೆ ಬರೊಬ್ಬರಿ 80 ಕೋಟಿ ಜನ್ ಧನ್ ಅಕೌಂಟ್ ಹ್ಯಾಕ್ ಮಾಡಿ ಹಣ ಎಗರಿಸುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.
ಬಿಟ್ ಕಾಯಿನ್ ದಂಧೆಗೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಶ್ರೀಕೃಷ್ಣನನ್ನು ಜಾಮೀನಿನ ಮೂಲಕ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯ ವೇಳೆ ಮಾಧ್ಯಮಗಳು ಈತನ ಬೆನ್ನತ್ತಿ ಪ್ರಶ್ನೆಗಳನ್ನು ಕೇಳಿದ್ದು, ಈ ವೇಳೆ, ತನಗೆ ಯಾರು ಜಾಮೀನು ನೀಡಿದ್ದಾರೆನ್ನುವುದು ಗೊತ್ತಿಲ್ಲ ಎಂದು ಆತ ಹೇಳಿಕೊಂಡಿದ್ದ ಎಂದು ವರದಿಯಾಗಿತ್ತು. ಇಷ್ಟೊಂದು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದ ಆರೋಪಿಯನ್ನು ಹೇಗೆ ಬಿಡುಗಡೆ ಮಾಡಲಾಯಿತು? ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು
ಬಾಲಕಿಯನ್ನು ಕಾರು ಚಾಲಕ ಹಿಂಬಾಲಿಸಿದ ಪ್ರಕರಣಕ್ಕೆ ತಿರುವು!
ನದಿಗೆ ಇಳಿದು ವಿಡಿಯೋ ಮಾಡುತ್ತಿದ್ದ ವೇಳೆ ಯುವಕ ನೀರುಪಾಲು! | ವಿಡಿಯೋ ವೈರಲ್
ನಾನು ಜೀವಂತವಿದ್ದೇನೆ: ತನ್ನ ಹತ್ಯೆಯ ವದಂತಿಯ ಬಗ್ಗೆ ರಾಷ್ಟ್ರಮಟ್ಟದ ಕುಸ್ತಿಪಟು ನಿಶಾ ದಹಿಯಾ ಸ್ಪಷ್ಟನೆ
ಮರಿ ಆನೆಗೆ “ಪುನೀತ್ ರಾಜ್ ಕುಮಾರ್” ಎಂದು ನಾಮಕರಣ ಮಾಡಿದ ಅರಣ್ಯ ಇಲಾಖೆ
ಖಾಸಗಿ ಬಸ್ ಗೆ ಡಿಕ್ಕಿ ಹೊಡೆದ ಟ್ಯಾಂಕರ್: ಹೊತ್ತಿ ಉರಿದ ಬಸ್ ನಲ್ಲಿದ್ದ 12 ಮಂದಿ ದಾರುಣ ಸಾವು