ಶ್ರೀಕೃಷ್ಣ ಪರಮಾತ್ಮನ ಕೈ ತುಂಡಾಯಿತು ಎಂದು ವಿಗ್ರಹವನ್ನು ಆಸ್ಪತ್ರೆಗೆ ದಾಖಲಿಸಿದ ಅರ್ಚಕ
ಉತ್ತರಪ್ರದೇಶ: ಜನರು ತಮ್ಮ ಕಷ್ಟಗಳಿಗೆ ದೇವರ ಮೊರೆ ಹೋಗುವುದು ಸಹಜ ಆದರೆ, ಇಲ್ಲೊಬ್ಬ ಅರ್ಚಕ ದೇವರ ಕಷ್ಟಕ್ಕೆ ವೈದ್ಯರನ್ನು ಹುಡುಕಿಕೊಂಡು ಆಸ್ಪತ್ರೆಗೆ ಬಂದ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಇಲ್ಲಿನ ದೇವಸ್ಥಾನವೊಂದರ ಅರ್ಚಕ ಲೇಖ್ ಸಿಂಗ್ ಎಂಬಾತ, ಶ್ರೀಕೃಷ್ಣನ ಮೂರ್ತಿಯನ್ನು ಶುಚಿಗೊಳಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿಗ್ರಹದ ಕೈಮುರಿದಿದ್ದು, ಇದರಿಂದ ಆತಂಕಗೊಂಡ ಆತ ವಿಗ್ರಹವನ್ನು ವೈದ್ಯರ ಬಳಿಗೆ ತಂದು ಈ ಕೈಯನ್ನು ಜೋಡಿಸಿ ಚಿಕಿತ್ಸೆ ನೀಡಿ ಎಂದು ಕೇಳಿದ್ದಾನೆ.
ಅರ್ಚಕನ ಹುಚ್ಚಾಟವನ್ನು ಗಮನಿಸಿದ ವೈದ್ಯರು, ಕೊನೆಗೆ ಉಪಾಯವಿಲ್ಲದೇ ಶ್ರೀಕೃಷ್ಣ ಹೆಸರಿನಲ್ಲಿ ವಿಗ್ರಹವನ್ನು ನೋಂದಣಿ ಮಾಡಿಸಿಕೊಂಡು ಕೃಷ್ಣನ ವಿಗ್ರಹದ ಕೈಗೆ ಬ್ಯಾಂಡೇಜ್ ಸುತ್ತಿ ಆತನನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಅತಿಯಾದರೆ ಅಮೃತವೂ ವಿಷ ಎಂಬಂತೆ ಅರ್ಚಕನ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಜನರನ್ನು ದೇವರು ಕಾಯುತ್ತಾರೆ ಎನ್ನುವ ನಂಬಿಕೆಯನ್ನು ಎಲ್ಲರು ಒಪ್ಪುತ್ತಾರೆ. ಆದರೆ, ಆಸ್ಪತ್ರೆಗೆ ದೇವರನ್ನು ದಾಖಲಿಸಲು ಮುಂದಾಗಿರುವುದು ಮತ್ತು ವಿಗ್ರಹದ ಕೈಗೆ ಬ್ಯಾಂಡೇಜ್ ಸುತ್ತಿರುವ ವೈದ್ಯ ಇಬ್ಬರಿಗೂ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪ್ರವಾಹಕ್ಕೆ ನಲುಗಿದ ಆಂಧ್ರಪ್ರದೇಶ: 17 ಮಂದಿ ಸಾವು, 100ಕ್ಕೂ ಅಧಿಕ ಮಂದಿ ನಾಪತ್ತೆ
ಆಟೋ—ಲಾರಿ ನಡುವೆ ಭೀಕರ ಅಪಘಾತ: ಇಬ್ಬರು ಮಕ್ಕಳ ಸಹಿತ ಐವರ ದಾರುಣ ಸಾವು
ಮಂಗಳೂರು: 1.92 ಕೋ.ರೂ. ಮೌಲ್ಯದ ಅಮಾನ್ಯ ನೋಟುಗಳು ಪತ್ತೆ
ಕೃಷಿ ಕಾಯ್ದೆ ವಾಪಸ್ | ಪತ್ರಕರ್ತರ ಪ್ರಶ್ನೆಗೆ ನಿರುತ್ತರವಾಗಿ ಮುಂದೆ ನಡೆದ ಸಚಿವೆ ಶೋಭಾ ಕರಂದ್ಲಾಜೆ
ಮಳೆ ಅನಾಹುತ: ಬಹುಮಹಡಿ ಕಟ್ಟಡದ ಗೋಡೆ ಕುಸಿದು 9 ಮಂದಿಯ ದಾರುಣ ಸಾವು
ಭಾರೀ ಮಳೆಗೆ ಬೆಂಗಳೂರಿನಲ್ಲಿ ಕುಸಿದು ಬಿದ್ದ ಮನೆ | ಮನೆಯಲ್ಲಿದ್ದವರು ಮಾಡಿದ್ದೇನು?