ಶ್ರೀರಾಮಸೇನೆ, ಭಜರಂಗದಳ, ಆರೆಸ್ಸೆಸ್ ,  ಹಿಂದೂ ಮಹಾಸಭಾಕ್ಕೆ ಬುಲ್ಡೋಜರ್ ಹೊಡೆಯಬೇಕು: ಸಿದ್ದರಾಮಯ್ಯ ಕಿಡಿ - Mahanayaka
12:12 PM Thursday 12 - December 2024

ಶ್ರೀರಾಮಸೇನೆ, ಭಜರಂಗದಳ, ಆರೆಸ್ಸೆಸ್ ,  ಹಿಂದೂ ಮಹಾಸಭಾಕ್ಕೆ ಬುಲ್ಡೋಜರ್ ಹೊಡೆಯಬೇಕು: ಸಿದ್ದರಾಮಯ್ಯ ಕಿಡಿ

siddaramaiha
24/04/2022

ಶಿವಮೊಗ್ಗ: ಶ್ರೀರಾಮಸೇನೆ, ಭಜರಂಗದಳ, ಆರೆಸ್ಸೆಸ್ ಹಾಗೂ ಹಿಂದೂ ಮಹಾಸಭಾಕ್ಕೆ ಬುಲ್ಡೋಜರ್ ಹೊಡೆದರೆ ಸಮಾಜ ಸರಿಯಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,   ಸರ್ಕಾರ ಇರುವುದು ಯಾರದ್ದು‌? ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಯ್ತು, 144 ಸೆಕ್ಷನ್ ಹಾಕಿದ್ದು ಯಾರು? ಈಶ್ವರಪ್ಪ ಯಾವ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಉಲ್ಲಂಘನೆ ಮಾಡಿದ್ದು ಯಾರು‌.? ಶವಯಾತ್ರೆ ಮಾಡಿದ್ದು ಯಾರು‌? ಹರ್ಷನ ಕುಟುಂಬಕ್ಕೆ 25 ಲಕ್ಷ ಕೊಡಿಸಿದ್ದು ಯಾರು? ನಾನು ಕೂಡ ಹರ್ಷನ ಕೊಲೆ ಖಂಡಿಸಿದ್ದೇನೆ. ಯಾರೇ ಅದ್ರೂ ಕೊಲೆಗಾರರಿಗೆ ಶಿಕ್ಷೆಯಾಗಬೇಕು. ಆದರೆ, ಒಂದು ಕಣ್ಣಿಗೆ ಬೆಣ್ಣೆ. ಇನ್ನೊಂದು ಕಣ್ಣಿಗೆ ಸುಣ್ಣ ಎಂದು ಮಾಡಬಾರದು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹರ್ಷನ ಕುಟುಂಬಕ್ಕೆ 25 ಲಕ್ಷ ರೂ. ಸರ್ಕಾರ ಪರಿಹಾರ ಕೊಟ್ಟಿದೆ. ಅದೇ ಬೆಳ್ತಂಗಡಿಯ ದಿನೇಶ್ ಕೊಲೆಯಾದಾಗ ಕುಟುಂಬಕ್ಕೆ ಎಷ್ಟು ಕೊಟ್ಟರು? ಎಂದು ಪ್ರಶ್ನಿಸಿದ ಅವರು,  ದಿನೇಶ್ ಕೊಲೆ ಮಾಡಿದವರು ಭಜರಂಗದಳದವರು. ನರಗುಂದದಲ್ಲಿ ಕೊಲೆಯಾದ ಮುಸ್ಲಿಂಗೆ ಎಷ್ಟು ಪರಿಹಾರ ಕೊಟ್ಟರು? ನರಗುಂದದಲ್ಲಿ ಕೊಲೆ ಮಾಡಿದವರು ಶ್ರೀ ರಾಮಸೇನೆಯವರು. ಕೊಲೆಯಾದವರಿಗೆ ಒಂದು ಪೈಸೆ ಸಹ ಪರಿಹಾರ ಕೊಡಲಿಲ್ಲ. ಯಾಕೇ ಹೀಗೆ ಎಂದು ಪ್ರಶ್ನಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆದಿವಾಸಿ ಮಹಿಳೆಯನ್ನು ಅರೆ ಬೆತ್ತಲೆಗೊಳಿಸಿ ಹಲ್ಲೆ: ಧರ್ಮಾಧಿಕಾರಿಯವರು ದನಿ ಎತ್ತದೆ ಸುಮ್ಮನಿದ್ದಾರೆ | ಬಿ.ಟಿ‌.ಲಲಿತಾನಾಯಕ್

ಮನೆಯೊಳಗೆ ಸ್ಫೋಟಗೊಂಡ ಎಲೆಕ್ಟ್ರಿಕ್ ಬೈ ಕ್‌ ನ ಬ್ಯಾಟರಿ: ಓರ್ವ ಸಾವು, ಮಹಿಳೆಯ ಸ್ಥಿತಿ ಗಂಭೀರ

ಗೂಗಲ್  ಡೂಡಲ್‌ ನಲ್ಲಿ ಕಾಣಿಸಿಕೊಂಡ ನಾಜಿಹಾ ಸಲೀಂ ಯಾರು ?

ಅಪ್ರಾಪ್ತ ಬಾಲಕಿಗೆ ನಂಬರ್ ಕೊಟ್ಟ ಕಂಡೆಕ್ಟರ್ ಗೆ ಹಿಗ್ಗಾಮುಗ್ಗಾ ಥಳಿಸಿದ ಬಾಲಕಿಯ ತಾಯಿ: ವಿಡಿಯೋ ವೈರಲ್

ಪರೀಕ್ಷೆಗೆ ಓದುತ್ತಿದ್ದ ವೇಳೆ ಟೆರೆಸ್ ನಿಂದ ಬಿದ್ದು ವಿದ್ಯಾರ್ಥಿ ಸಾವು

ಇತ್ತೀಚಿನ ಸುದ್ದಿ