ಫೆ. 19ರಂದು ಬಳ್ಳಾಜೆ-ಕೊಳವೂರು ಶ್ರೀ ಸತ್ಯಸಾರಮಾನಿ ದೈವಸ್ಥಾನದ ವಾರ್ಷಿಕ ನೇಮೋತ್ಸವ
ಮಂಗಳೂರು: ತಾಲೂಕಿನ ಕುಪ್ಪೆ ಪದವು ಸಮೀಪದ ಬಳ್ಳಾಜೆ-ಕೊಳವೂರು ಶ್ರೀ ಸತ್ಯಸಾರಮಾನಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಫೆ. 19ರಂದು ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅಂದು ಸಂಜೆ 4ಕ್ಕೆ ಪಾರ್ಥನೆ, ಸ್ಥಳ ಶುದ್ಧಿ ನವಕ ಪ್ರಧಾನ ಹೋಮ ನಡಯಲಿದೆ. ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದೆ.
ರಾತ್ರಿ 9ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದ್ದು, 10 ಗಂಟೆಗೆ ಶ್ರೀ ಸತ್ಯಸಾರಮಾನಿ ದೈವಗಳ ಪಾತ್ರಿ ದರ್ಶನ, ಬಳಿಕ ಧರ್ಮದೈವ ಶ್ರೀ ಅಲೆರಾ ಪಂಜುರ್ಲಿ ದೈವದ ನೇಮೋತ್ಸವ ಮುಂಜಾನೆ 4 ಗಂಟೆಗೆ ದೈವರಾಜ ಗುಳಿಗ ದೈವದ ಗಗ್ಗರ ಸೇವೆ ಜರುಗಲಿದೆ.
ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಆಗಮಿಸಿ ದೈವದ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಸತ್ಯಸಾರಮಾನಿ ಸೇವಾ ಸಮಿತಿ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಸಮಾಜ ಸೇವಾ ಸಂಘ (ರಿ) ಬಳ್ಳಾಜೆ ಕುಳವೂರಿನ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಆಫ್‍ಲೈನ್ ತರಗತಿಗೆ ಹೋಗುವಂತೆ ಪೋಷಕರು ಒತ್ತಾಯಿಸಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ
ಸರ್ಕಾರಿ ನೌಕರನ ಎರಡನೇ ಪತ್ನಿಗೆ ಪಿಂಚಣಿ ಇಲ್ಲ | ಬಾಂಬೆ ಹೈಕೋರ್ಟ್
ಜಾಗಟೆ, ಗಂಟೆಯಿಂದ ಶಬ್ದ ಮಾಲಿನ್ಯ: ಆದೇಶ ವಾಪಸ್ ಪಡೆಯಲಾಗಿದೆ | ಅರಗ ಜ್ಞಾನೇಂದ್ರ
ಮದುವೆ ಸಂಭ್ರಮದ ವೇಳೆ ಒಂದು ಕ್ಷಣದಲ್ಲೇ ನಡೆದಿತ್ತು ದುರಂತ: 13 ಮಂದಿಯ ದಾರುಣ ಸಾವು