ಪುರಾತನ ಕಾಲದ ಮಸೀದಿಗೆ ಕೇಸರಿ ಬಣ್ಣ ಬಳಿದ ದುಷ್ಕರ್ಮಿಗಳು - Mahanayaka

ಪುರಾತನ ಕಾಲದ ಮಸೀದಿಗೆ ಕೇಸರಿ ಬಣ್ಣ ಬಳಿದ ದುಷ್ಕರ್ಮಿಗಳು

narmadapuram
14/03/2022

ನರ್ಮದಾಪುರಂ:  ಪುರಾತನ ಕಾಲದ ಮಸೀದಿಯೊಂದಕ್ಕೆ ದುಷ್ಕರ್ಮಿಗಳು ಕೇಸರಿ ಬಣ್ಣ ಬಳಿದ ಘಟನೆ ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿಮೀ ದೂರದಲ್ಲಿ ನಡೆದಿದೆ.

ಐದು ದಶಕಗಳ ಮಸೀದಿ ಇದಾಗಿದ್ದು,  ಬೆಳಗ್ಗಿ 6 ಗಂಟೆಯ ವೇಳೆ ಮಸೀದಿಗೆ ಕೇಸರಿ ಬಣ್ಣ ಬಳಿದಿರುವುದು ಬೆಳಕಿಗೆ ಬಂದಿದ್ದು, ರಾತ್ರಿ ವೇಳೆ ದುಷ್ಕರ್ಮಿಗಳು ಈ ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಮಸೀದಿಯ ಗುಮ್ಮಟ, ಸಮಾಧಿ, ಪ್ರವೇಶ ದ್ವಾರಕ್ಕೂ ಕೇಸರಿ ಬಣ್ಣವನ್ನು ಬಳಿಯಲಾಗಿದೆ. ಮಸೀದಿ ಆವರಣದಲ್ಲಿದ್ದ ಹ್ಯಾಂಡ್ ಪಂಪ್ ನ್ನು ಕೂಡ ಕಿತ್ತು ಹಾಕಲಾಗಿದೆ ಎಂದು ಮಸೀದಿಯ ಉಸ್ತುವಾರಿ ಅಬ್ದುಲ್ ಸತ್ತಾರ್ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದ್ದು,  ಐಪಿಸಿ ಸೆಕ್ಷನ್ 295ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಮಖಾನ್ ನಗರ ಪೊಲೀಸ್ ಠಾಣೆಯ ಟೌನ್ ಇನ್ಸ್‌ಪೆಕ್ಟರ್ ಹೇಮಂತ್ ಶ್ರೀವಾಸ್ತವ್, ನಾವು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಶೀಘ್ರದಲ್ಲೇ ಬಂಧಿಸುತ್ತೇವೆ. ಮಸೀದಿಯನ್ನು ಪುನಃ ಹಿಂದಿನಂತೆಯೇ ಪುನಃ ಸ್ಥಾಪಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು,  ಜನರು ಶಾಂತಿಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

ಹೊರಗಿನ ವ್ಯಕ್ತಿಗಳಿಂದ ಕೃತ್ಯ:

ಪೊಲೀಸರು ಹೇಳುತ್ತಿರುವಂತೆ. ಈ ಪ್ರದೇಶದಲ್ಲಿ ಹಿಂದೂ ಹಾಗೂ ಮುಸ್ಲಿಮರು ಸೌಹಾರ್ದದಲ್ಲಿದ್ದಾರೆ. ಆದರೆ, ಎರಡು ಕೋಮುಗಳ ನಡುವೆ ಸಂಘರ್ಷ ಉಂಟು ಮಾಡಲು ಹೊರಗಿನಿಂದ ಬಂದು ಯಾರೋ ಈ ಕೃತ್ಯ ನಡೆಸಿದ್ದಾರೆ ಎಂಬ ಶಂಕೆ ಇದೆ. ಈ ಪ್ರದೇಶದಲ್ಲಿ ಈವರೆಗೂ ಯಾವುದೇ ಕೋಮು ಉದ್ವಿಗ್ನತೆಗಳು ಇರಲಿಲ್ಲ ಎಂದು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬುಧವಾರ ಪ್ರಮಾಣ ವಚನ ಸ್ವೀಕರಿಸಲಿರುವ ಭಗವಂತ್ ಮಾನ್: ರ್‍ಯಾಲಿಯಲ್ಲಿ ಭಾಗವಹಿಸಲಿರುವ ಕೇಜ್ರಿವಾಲ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್

ಕೂದಲು ಕಸಿ ಮಾಡಿಸಿಕೊಂಡ ಮರುದಿನವೇ ಪೊಲೀಸ್ ಕಾನ್ ಸ್ಟೇಬಲ್ ದುರಂತ ಸಾವು!

ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ

ಒಂದೇ ದಿನ 81 ಮಂದಿಯನ್ನು ಗಲ್ಲಿಗೇರಿಸಿದ ಸೌದಿ ಅರೇಬಿಯಾ ಸರ್ಕಾರ!

ಇತ್ತೀಚಿನ ಸುದ್ದಿ