ಕಂಬಳ ವೀರ ಶ್ರೀನಿವಾಸ್ ಗೌಡಗೆ ಅವಾಚ್ಯ ಶಬ್ಧಗಳಿಂದ ನಿಂದನೆ | ಆರೋಪಿಯ ಬಂಧನಕ್ಕೆ ಹೆಚ್ಚಿದ ಒತ್ತಾಯ - Mahanayaka

ಕಂಬಳ ವೀರ ಶ್ರೀನಿವಾಸ್ ಗೌಡಗೆ ಅವಾಚ್ಯ ಶಬ್ಧಗಳಿಂದ ನಿಂದನೆ | ಆರೋಪಿಯ ಬಂಧನಕ್ಕೆ ಹೆಚ್ಚಿದ ಒತ್ತಾಯ

shrinivas gowda
17/07/2021

ಮೂಡುಬಿದಿರೆ: ಕಂಬಳ ಕ್ಷೇತ್ರದಲ್ಲಿ ದೇಶವೇ ಮೆಚ್ಚುವ ಸಾಧನೆ ಮಾಡಿರುವ ಶ್ರೀನಿವಾಸ್ ಗೌಡ ಅವರನ್ನು ಅತ್ಯಂತ ಹೀನಾಯ ಭಾಷೆಗಳನ್ನು ಬಳಸಿ ವ್ಯಕ್ತಿಯೋರ್ವ ನಿಂದಿಸಿದ ಘಟನೆ ನಡೆದಿದ್ದು,  ಈ ಘಟನೆಯ ವಿರುದ್ಧ ಕಂಬಳಾಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಂಬಳದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಬಂಗೇರ ಎಂಬಾತ ಶ್ರೀನಿವಾಸ್ ಗೌಡ ಅವರ ಜೊತೆಗೆ ಕರೆ ಮಾಡಿ ಮಾತನಾಡಿದ್ದು, ಈ ವೇಳೆ ಶ್ರೀನಿವಾಸ್ ಗೌಡರು ಬಹಳ ತಾಳ್ಮೆಯಿಂದಲೇ ಉತ್ತರಿಸಿದ್ದಾರೆ. ಆದರೆ, ಪ್ರಶಾಂತ್ ಬಂಗೇರ,  ಶ್ರೀನಿವಾಸ್ ಗೌಡ ಹಾಗೂ ಅವರ ಕುಟುಂಬದ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಮೊದಲಾದವರ ಹೆಸರುಗಳನ್ನು ಪ್ರಸ್ತಾಪಿಸಿರುವ ಪ್ರಶಾಂತ್ ಬೆಂಗೇರ, ಶ್ರೀನಿವಾಸ್ ಗೌಡ ಅವರನ್ನು ಬೆದರಿಸಲು ಯತ್ನಿಸಿರುವುದು ಆಡಿಯೋದಲ್ಲಿ ದಾಖಲಾಗಿದೆ.  ಇನ್ನೂ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವಂತೆ  ಶಾಸಕ ಉಮಾನಾಥ್ ಕೋಟ್ಯಾನ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಆರೋಪಿಯ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಇದೀಗ ಕೇಳಿ ಬಂದಿದ್ದಿದ್ದು, ಪ್ರಶಾಂತ್ ಬಂಗೇರ ಬಳಸಿದ ಭಾಷೆ ಅತ್ಯಂತ ನಿಕೃಷ್ಟವಾಗಿದೆ. ಇಂತಹವರು ರಾಜಕೀಯ ವ್ಯಕ್ತಿಗಳ ಪ್ರಭಾವದ ಧೈರ್ಯದಿಂದ ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ. ಇಂತಹವರ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಇನ್ನಷ್ಟು ಸುದ್ದಿಗಳು…

“ಜಾನುವಾರುಗಳಿಗೆ ಆಂಬುಲೆನ್ಸ್, ಜಿಲ್ಲೆಗೊಂದು ಗೋ ಶಾಲೆ”

ಸೇತುವೆ ಇಲ್ಲ: ತೋಡಿನಲ್ಲಿ ವೃದ್ಧೆಯನ್ನು ಸ್ಟ್ರೆಚರ್ ಮೂಲಕ ಸಾಗಿಸುವ ದುಸ್ಥಿತಿ

ನೆಲ್ಯಾಡಿ:  ಮೂರೂವರೆ ಗಂಟೆಗಳ ಅಂತರದಲ್ಲಿ ಪತಿ-ಪತ್ನಿ ಇಬ್ಬರೂ ಕೊವಿಡ್ ಗೆ ಬಲಿ

ಪ್ರೇಮಿಗೆ ಹಿಗ್ಗಾಮುಗ್ಗಾ ಥಳಿಸಿದರೂ, ಆತನ ಪ್ರೀತಿಗೆ ಕರಗಿ ಮಗಳ ಕೊಟ್ಟು ಮದುವೆ ಮಾಡಿದರು!

ಇತ್ತೀಚಿನ ಸುದ್ದಿ