ಅರ್ಜುನ್ ಸರ್ಜಾ ವಿರುದ್ಧ ಮೀಟೂ ಕೇಸ್: ಪೊಲೀಸರ ಬಿ ರಿಪೋರ್ಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಶ್ರುತಿ ಹರಿಹರನ್ - Mahanayaka
9:14 AM Thursday 12 - December 2024

ಅರ್ಜುನ್ ಸರ್ಜಾ ವಿರುದ್ಧ ಮೀಟೂ ಕೇಸ್: ಪೊಲೀಸರ ಬಿ ರಿಪೋರ್ಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಶ್ರುತಿ ಹರಿಹರನ್

arjun sarja
09/06/2023

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಭಾರೀ ಸದ್ದು ಮಾಡಿದ್ದ ನಟಿ ಶ್ರುತಿ ಹರಿಹರನ್​ ಹಾಗೂ ಅರ್ಜುನ್​ ಸರ್ಜಾ ನಡುವಿನ ಮಿಟೂ ಪ್ರಕರಣದಲ್ಲಿ ಇದೀಗ ಮತ್ತೊಂದು ಟ್ವಿಸ್ಟ್​ ಎದುರಾಗಿದೆ. ಕಬ್ಬನ್​ ಪಾರ್ಕ್​ ಪೊಲೀಸರ ಬಿ ರಿಪೋರ್ಟ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ನಟಿ ಶ್ರುತಿ ಹರಿಹರನ್​ಗೆ ಇದೀಗ ನೋಟಿಸ್​ ನೀಡಿದ್ದಾರೆ.

ಈ ಸಂಬಂಧ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್​ನಿಂದ ನೋಟಿಸ್​ ಜಾರಿ ಆಗಿದೆ. ಈ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧರ ಸಲ್ಲಿಸುವಂತೆ ನಟಿಗೆ ಸೂಚನೆ ನೀಡಲಾಗಿದೆ.

ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಕಬ್ಬನ್​ಪಾರ್ಕ್ ಪೊಲೀಸರು ಈ ಪ್ರಕರಣ ಸಂಬಂಧ 2022ರ ಜನವರಿ ತಿಂಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ ಕಬ್ಬನ್​ಪಾರ್ಕ್​ ಪೊಲೀಸರು ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿದ್ದನ್ನು ಪ್ರಶ್ನಿಸಿ ನಟಿ ಶ್ರುತಿ ಹರಿಹರನ್​ ಕೋರ್ಟ್ ಮೆಟ್ಟಿಲೇರಿದ್ದರು.

ಬಿ ರಿಪೋರ್ಟ್ ಚಾಲೆಂಜ್​ ಮಾಡಿದ್ದ ಶ್ರುತಿ ಹರಿಹರನ್​ ನೋಟಿಸ್​ ನೀಡಿರುವ ಕಬ್ಬನ್​ಪಾರ್ಕ್ ಠಾಣಾ ಪೊಲೀಸರು ಈ ಪ್ರಕರಣ ಸಂಬಂಧ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡುವಂತೆ ಕೇಳಿದ್ದಾರೆ. ಕೋರ್ಟ್​ನಲ್ಲಿ ಅರ್ಜಿ ವಿಚಾರಣೆಯ ಬಳಿಕ ಶ್ರುತಿ ಹರಿಹರನ್​ಗೆ ಈ ನೋಟಿಸ್​ ನೀಡಲಾಗಿದೆ . ಕೋರ್ಟ್​ನ ನೋಟಿಸ್​​ ಬಳಿಕ ಶ್ರುತಿ ಹರಿಹರನ್​​ ಸೂಕ್ತ ಸಾಕ್ಷ್ಯಾಧರ ಸಲ್ಲಿಸುವಲ್ಲಿ ವಿಫಲರಾದಲ್ಲಿ ಕಬ್ಬನ್​ಪಾರ್ಕ್ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್​ನ್ನು ಕೋರ್ಟ್ ಮಾನ್ಯ ಮಾಡಲಿದೆ

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ