ಪೊಲೀಸ್ ಠಾಣೆಯಲ್ಲಿ ಬರ್ತ್ ಡೇ | ಎಸ್ ಐ ಸಹಿತ 10 ಪೊಲೀಸರಿಗೆ ಕೊರೊನಾ! - Mahanayaka

ಪೊಲೀಸ್ ಠಾಣೆಯಲ್ಲಿ ಬರ್ತ್ ಡೇ | ಎಸ್ ಐ ಸಹಿತ 10 ಪೊಲೀಸರಿಗೆ ಕೊರೊನಾ!

padubiddre
22/05/2021

ಉಡುಪಿ: ಪಡುಬಿದ್ರೆ ಠಾಣೆಯ 10 ಮಂದಿ ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಪೊಲೀಸ್ ಠಾಣೆಯಲ್ಲಿ ಸಮೀಪದಲ್ಲಿಯೇ ಇರುವ ಬೋರ್ಡ್ ಶಾಲೆಗೆ ಸ್ಥಳಾಂತರ ಮಾಡಲಾಗಿದೆ ಎಂದು ವರದಿಯಾಗಿದೆ.

ಪೊಲೀಸ್ ಠಾಣೆಯಲ್ಲಿ ಕೆಲವು ದಿನಗಳ ಹಿಂದೆ ಸಿಬ್ಬಂದಿಯೊಬ್ಬರ ಹುಟ್ಟು ಹಬ್ಬವನ್ನು ಆಚರಿಸಲಾಗಿತ್ತು.  ಬರ್ತ್ ಡೇ ಔತಣ ಕೂಟವನ್ನೂ ಮಾಡಲಾಗಿತ್ತು. ಔತಣ ಕೂಟ ನಡೆದು ವಾರದೊಳಗೆ ಸಿಬ್ಬಂದಿಯೊಬ್ಬರಿಗೆ ಜ್ವರ ಕಾಣಿಸಿಕೊಂಡಿದೆ. ಪರೀಕ್ಷೆ ನಡೆಸಿದಾಗ ಕೊವಿಡ್ ದೃಢಪಟ್ಟಿದೆ ಎಂದು ತಿಳಿದು ಬಂದಿದೆ.

ಠಾಣೆಯ ಎಸ್ ಐ ಸಹಿತ 10 ಸಿಬ್ಬಂದಿಗೆ ಇದೀಗ ಕೊರೊನಾ ಸೋಂಕು ದೃಢಪಟ್ಟಿದ್ದು, ಎಲ್ಲ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದ್ದು, ಠಾಣೆಯನ್ನು 24 ಗಂಟೆ ಸೀಲ್ ಡೌನ್ ಮಾಡಲಾಗಿದೆ.

ಇತ್ತೀಚಿನ ಸುದ್ದಿ