ಸಿದ್ದರಾಮಯ್ಯ ಕನ್ವರ್ಟ್ ಕಾಂಗ್ರೆಸ್: ಸಚಿವ ಬಿ.ಸಿ.ನಾಗೇಶ್ - Mahanayaka
8:21 PM Wednesday 5 - February 2025

ಸಿದ್ದರಾಮಯ್ಯ ಕನ್ವರ್ಟ್ ಕಾಂಗ್ರೆಸ್: ಸಚಿವ ಬಿ.ಸಿ.ನಾಗೇಶ್

minister bc nagesh
27/03/2022

ತುಮಕೂರು: ಮೂಲ ಕಾಂಗ್ರೆಸ್ಸಿಗರು ಯಾರೂ ಸ್ವಾಮೀಜಿಗಳ ಶಿರವಸ್ತ್ರದ ವಿರುದ್ಧದ ಹೇಳಿಕೆ ನೀಡಲ್ಲ. ಸಿದ್ದರಾಮಯ್ಯ ಅವರು ಕನ್ವರ್ಟ್ ಕಾಂಗ್ರೆಸ್‍ನವರು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ. ನಾಗೇಶ್, ಮೂಲ ಕಾಂಗ್ರೆಸ್ಸಿಗರು ಈ ರೀತಿ ಮಾತನಾಡುತ್ತಿಲ್ಲ. ಹೊಸದಾಗಿ ಕನ್ವರ್ಟ್ ಆದವರು ತುಂಬಾ ಸಲ ಚರ್ಚ್‍ಗೆ ಹೋಗುತ್ತಾರೆ. ಹಾಗೆ ಸಿದ್ದರಾಮಯ್ಯ ಕಠಿಣ ಪ್ರಾಕ್ಟಿಸ್ ಮಾಡೋಕೆ ಹೋಗಿ ವಿವಾದ ಮೈ ಮೇಲೆ ಎಳೆದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

ಹಿಜಬ್ ವಿಚಾರದಲ್ಲಿ ಸ್ವಾಮಿಗಳನ್ನು ಎಳೆದು ತಂದಿರೋದು ದುಃಖ ತಂದಿದೆ. ಸರ್ವಸ್ವವನ್ನೂ ತ್ಯಾಗ ಮಾಡಿ, ಈ ದೇಶದ ಸಂಸ್ಕೃತಿ ರಕ್ಷಣೆ ಮಾಡೋರು ಸ್ವಾಮೀಜಿಗಳು. ಸಮಾಜದ ಒಳಿತಿಗೋಸ್ಕರ ತಮ್ಮ ಜೀವನ ಸವೆದವರನ್ನ ಹಿಜಬ್ ವಿವಾವದಲ್ಲಿ ಎಳೆದು ತಂದಿರೋದು ತುಂಬಾ ದುಃಖ ಆಗುತ್ತದೆ ಬೇಸರ ವ್ಯಕ್ತಪಡಿಸಿದರು.

ಹಿಜಬ್ ವಿಚಾರವಾಗಿ ಮಾತನಾಡಿ, ಮುಲ್ಲಾಗಳು ಸಿದ್ದರಾಮಯ್ಯರ ಬಳಿ ಬಂದಿದರಂತೆ. ಆಗ ಸಿದ್ದರಾಮಯ್ಯ ಅವರು ಸುಪ್ರಿಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲಿವರೆಗೂ ಸುಮ್ಮನೀರಿ ಎಂದು ಅವರಿಗೆ ತಿಳಿ ಹೇಳಬಹುದಿತ್ತು. ಆದರೆ ಕಾಂಗ್ರೆಸ್ ಉದ್ದಕ್ಕೂ ಸಮಾಜ ಒಡೆಯುವ ಕೆಲಸ ಮಾಡಿಕೊಂಡು ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದಿ ಕಾಶ್ಮೀರ್ ಫೈಲ್ ಸಿನಿಮಾ ನಿರ್ದೇಶಕನ ವಿರುದ್ಧ ದೂರು ದಾಖಲು

ಸವದತ್ತಿ ಯಲ್ಲಮ್ಮ ದೇವಸ್ಥಾನ ಬಳಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ನೀಡದಂತೆ ಪ್ರಮೋದ್ ಮುತಾಲಿಕ್ ಮನವಿ

ಕಿಡಿಗೇಡಿಗಳಿಂದ ಜೋಗಿಮಟ್ಟಿ ಗಿರಿಧಾಮಕ್ಕೆ ಬೆಂಕಿ: ಅಪಾರ ಔಷಧಿ ಸಸಿಗಳು ನಾಶ

ಶ್ರೀಗಂಧ ಬೆಳೆಗಾರರಿಂದ ಅರೆಬೆತ್ತಲೆ ಪ್ರತಿಭಟನೆ

ಇತ್ತೀಚಿನ ಸುದ್ದಿ