ಅನಾರೋಗ್ಯ ಇದ್ದರೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪ್ರಮಾಣ ವಚನವನ್ನು ಸಂಭ್ರಮಿಸಿದ ಮಹಿಳೆ

ಮನುಷ್ಯನ ಮನಸ್ಸು ಅನಾರೋಗ್ಯಕ್ಕೀಡಾದರೂ ಸಂಭ್ರಮಿಸುವ ಮನಸ್ಸು ಆರೋಗ್ಯ ಪೂರ್ಣವಾಗಿರುತ್ತದೆ ಎನ್ನುವುದಕ್ಕೆ ಇದೇ ಒಂದು ಸಾಕ್ಷಿಯಾಗಿದೆ.
ಹೌದು. ಇವ್ರ ಹೆಸರು ಲಲಿತಾ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಪೆರಿಯಡ್ಕದ ನಿವಾಸಿ. ಇವರು ಬಹುತೇಕ ಸಮಯ ಉಪ್ಪಿನಂಗಡಿಯ ಪೊಲೀಸ್ ಠಾಣೆ ಮತ್ತು ಪಂಚಾಯತ್ ಕಚೇರಿಯ ಬಳಿಯಲ್ಲಿಯೇ ಕಾಣ ಸಿಗುತ್ತಾರೆ.
ಕಳೆದ ರಾತ್ರಿ ಇವ್ರು ಉಪ್ಪಿನಂಗಡಿ ಪಂಚಾಯತ್ ಕಚೇರಿಯ ಹೊರ ಆವರಣದ ಗೋಡೆಯಲ್ಲಿ ಸಾಲು ಸಾಲಾಗಿ ಮೇಣದ ಬತ್ತಿಯನ್ನು ಉರಿಸಿ ಸಂಭ್ರಮಿಸುತ್ತಿರುವುದು ಕಂಡು ಬಂತು. ವಿಚಾರಿಸಿದಾಗ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದಕ್ಕಾಗಿ ಸಾಲು ಸಾಲು ದೀಪಗಳನ್ನು ಉರಿಸಿ ಸಂಭ್ರಮಿಸುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ.
ತನ್ನನ್ನು ಮಾನಸಿಕ ಅಸ್ವಸ್ಥತೆ ಕಾಡುತ್ತಿದ್ದರೂ ದೂರದ ಬೆಂಗಳೂರಿನಲ್ಲಿ ನಡೆದ ಪ್ರತಿಜ್ಞಾ ವಿಧಿ ಸಮಾರಂಭದ ಬಗ್ಗೆ ಮಾಹಿತಿ ಪಡೆದು ಅದಕ್ಕಾಗಿ ಮೇಣದ ಬತ್ತಿಗಳನ್ನು ಖರೀದಿಸಿ ಉಪ್ಪಿನಂಗಡಿಯ ಆಡಳಿತ ಕೇಂದ್ರ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ದೀಪ ಪ್ರಜ್ವಲಿಸುವ ಈಕೆಯ ನಡೆ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw