ಫೋಟೋ ಹಾಕಿಲ್ಲ ಅಂತ, ಸಿದ್ದರಾಮಯ್ಯ ಕಾರ್ಯಕ್ರಮಕ್ಕೇ ಬಂದಿಲ್ಲ, ಇನ್ನು ಸಿಎಂ ಸ್ಥಾನ ಬಿಡ್ತಾರಾ? | ಕುಮಾರಸ್ವಾಮಿ ಪ್ರಶ್ನೆ

ಮೈಸೂರು: ಜೆಡಿಎಸ್ ಪಕ್ಷ ಕಟ್ಟಿದ್ದೇನೆ ಎಂದು ಸಿದ್ದರಾಮಯ್ಯ(Siddaramaiah) ಹೇಳುತ್ತಾರೆ. ಆದ್ರೆ, ಬ್ಯಾನರ್ ನಲ್ಲಿ ಫೋಟೋ ಇಲ್ಲವೆಂದು ಕಾರ್ಯಕ್ರಮಕ್ಕೆ ಬಂದಿಲ್ಲ. ಇನ್ನು ಅವ್ರು ಸಿಎಂ ಸ್ಥಾನವನ್ನ ಬೇರೆಯವ್ರಿಗೆ ಬಿಟ್ಟುಕೊಡುತ್ತಾರಾ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(H.D.Kumaraswamy) ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಟೀಕಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಲಿನ ಮೇಲೆ ಕಾಲುಹಾಕಿ ದೇವೇಗೌಡರನ್ನ ಒದ್ದುಕೊಂಡು ಕುಳಿತುಕೊಳ್ಳುತ್ತಿದ್ದರು. ಇದನ್ನೆಲ್ಲ ನಾವು ನೋಡಿದ್ದೇವೆ ಎಂದು ಹೇಳಿದರು. ಜೊತೆಗೆ ಕಾಂಗ್ರೆಸ್(Congress) ಜೊತೆಗಿನ ಮೈತ್ರಿಯಿಂದ ನಮ್ಮ(JDS) ಪಕ್ಷಕ್ಕೆ ಹಾನಿಯಾಗಿದೆ. ನಮ್ಮ ಶಕ್ತಿ ಇದ್ದ ಕಡೆ ನಮಗೆ ಹಿನ್ನಡೆಯಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಾಲಮನ್ನಾ ಮಾಡುವುದಕ್ಕೆ ಕಾಂಗ್ರೆಸ್ ಬೆಂಬಲ ಕೊಡಲಿಲ್ಲ. ಭಾಗ್ಯ ಕಾರ್ಯಕ್ರಮಗಳನ್ನ ನಿಲ್ಲಿಸಬಾರದು, ಬಜೆಟ್ ಬೇಡ ಅಂತೆಲ್ಲಾ ಹೇಳಿದರು ಎಂದು ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ತೈಲ ಬೆಲೆ ಏರಿಕೆಯ ಬಳಿಕ ಮತ್ತೊಂದು ಶಾಕ್: ಬೆಂಕಿ ಪೊಟ್ಟಣದ ಬೆಲೆಯೂ ಏರಿಕೆ!
ನಿಧಿಯ ಆಸೆಗೆ ಪತ್ನಿಯನ್ನು ಇಂಜೆಕ್ಷನ್ ಚುಚ್ಚಿ ಹತ್ಯೆ ಮಾಡಿದ ವೈದ್ಯ!
ರಾಜ್ಯ ಖಾಸಗಿ ಶಿಕ್ಷಕರ ಬಳಗದ ಸಂಸ್ಥಾಪಕ ಸಿ.ಎನ್.ನಾಗೇಶ್ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆ
ಬೆಲೆ ಏರಿಕೆ ಬೆನ್ನಲ್ಲೇ ಗುಜರಿ ಅಂಗಡಿಯಲ್ಲಿ ರಾಶಿ ರಾಶಿ ಗ್ಯಾಸ್ ಸಿಲಿಂಡರ್ ಗಳು!
ಜನ್ಮ ದಿನದಂದೇ ಡ್ರಗ್ಸ್ ಗ್ಯಾಂಗ್ ಗಳ ಗುಂಡಿಗೆ ಬಲಿಯಾದ ಭಾರತೀಯ ಮೂಲದ ಮಹಿಳೆ!
ದಲಿತ ಬಾಲಕಿಯ ಅತ್ಯಾಚಾರ: ಆರೆಸ್ಸೆಸ್ ಮುಖಂಡನ ವಿರುದ್ಧ ದಲಿತ ಸಂಘಟನೆಗಳಿಂದ ಪ್ರತಿಭಟನೆ