ಎಂಇಎಸ್ ಖ್ಯಾತೆ: ಸಿದ್ದರಾಮಯ್ಯ, ಡಿಕೆಶಿ ಅವರಿಂದ ದ್ವಂದ್ವ ಹೇಳಿಕೆ; ಸಚಿವ ಈಶ್ವರಪ್ಪ ಆರೋಪ
ಬೆಳಗಾವಿ: ಎಂಇಎಸ್ ಖ್ಯಾತೆ ಕುರಿತಂತೆ ವಿಪಕ್ಷನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮರ್ ಅವರು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ ಎಂದು ಗ್ರಾಮಾಭಿವೃದ್ಧಿ ಸಚಿವ ಈಶ್ವರಪ್ಪ ಆರೋಪಿಸಿದ್ದಾರೆ.
ಅನಗೋಳದಲ್ಲಿ ಮಾಧ್ಯಮಗೊಂದಿಗೆ ಮಾತನಾಡಿದ ಅವರು, ಸದನದೊಳಗೆ ಎಂಇಎಸ್ ನಿಷೇಧ ಮಾಡಲು ಸಿದ್ದರಾಮಯ್ಯ ಒತ್ತಾಯ ಮಾಡುತ್ತಾರೆ. ಹೊರಗೆ ಡಿ.ಕೆ.ಶಿವಕುಮಾರ್ ಎಂಇಎಸ್ ಪರ ಮಾತನಾಡುತ್ತಾರೆ. ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರದ ಜನರ ಮನವೊಲಿಸಲು ಡಿ.ಕೆ.ಶಿವಕುಮರ್ ದ್ವಂದ್ವ ಹೇಳಿಕೆ ನೀಡುತ್ತಾರೆ. ಕೃತ್ಯದ ಹಿಂದೆ ಯಾವ ಸಂಘಟನೆ ಇದೆ, ಯಾವ ರಾಜಕೀಯ ಇದೆ ಎನ್ನುವ ಬಗ್ಗೆ ತನಿಖೆ ಮಾಡುತ್ತೇವೆ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದರು.
ರಾಯಣ್ಣ ಮತ್ತು ಶಿವಾಜಿ ಬಗ್ಗೆ ಗೊತ್ತಿಲ್ಲದ ಕೆಲವರು ಅವರ ಬಗ್ಗೆ ಕೀಳಾದ ಕೃತ್ಯ ಎಸಗುತ್ತಾರೆ. ಅಂಥವರಿಗೆ ಗಡಿಪಾರು, ದೇಶ ದ್ರೋಹ ಅಲ್ಲ ಉತ್ತರ ಪ್ರದೇಶದಲ್ಲಿ ಮಾಡಿದಂತೆ ಗುಂಡು ಹಾರಿಸಬೇಕು. ಗುಂಡು ಹಾರಿಸುವ ಬಗ್ಗೆ ಸದನದಲ್ಲಿ ಹೇಳಿದ್ದೇನೆ. ಇಲ್ಲಿಯೂ ಹೇಳುತ್ತೇನೆ. ಹಾಗೆ ಮಾಡಿದರೆ ಇಂಥ ಕೃತ್ಯಕ್ಕೆ ಕಡಿವಾಣ ಬೀಳುತ್ತದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಎಂಇಎಸ್ ಖ್ಯಾತೆ: ಸಿದ್ದರಾಮಯ್ಯ, ಡಿಕೆಶಿ ಅವರಿಂದ ದ್ವಂದ್ವ ಹೇಳಿಕೆ; ಸಚಿವ ಈಶ್ವರಪ್ಪ ಆರೋಪ
ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ: ಪಾಕ್ ಕ್ರಿಕೆಟರ್ ವಿರುದ್ಧ ಎಫ್ ಐಆರ್
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆಗೈದ ಸ್ನೇಹಿತರು
ಓಮಿಕ್ರಾನ್ ಪ್ರಕರಣ: ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಾಗುತ್ತಾ? | ತಜ್ಞರು ನೀಡಿದ ಸಲಹೆ ಏನು?
ಭೀಕರ ಚಂಡಮಾರುತ: ಮೃತರ ಸಂಖ್ಯೆ 375ಕ್ಕೆ ಏರಿಕೆ
ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಕರ ಆಸ್ತಿ ಮುಟ್ಟುಗೋಲು: ಸಚಿವ ಎಸ್.ಟಿ.ಸೋಮಶೇಖರ್ ಸೂಚನೆ