ಸಿದ್ದರಾಮಯ್ಯಗೆ ಮಾಂಸಾಹಾರಿಗಳಿಂದ ವ್ಯಾಪಕ ಬೆಂಬಲ!
ಬೆಂಗಳೂರು: ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣ ತೀವ್ರತೆ ಪಡೆದುಕೊಳ್ಳುತ್ತಿದ್ದಂತೆಯೇ, ಸಿದ್ದರಾಮಯ್ಯನವರು ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದಾರೆ ಎಂಬ ವಿವಾದ ಸೃಷ್ಟಿಸಲಾಗಿದ್ದು, ಇದೀಗ ಮಾಂಸಾಹಾರಿಗಳ ಪರವಾಗಿ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ದಾರೆ.
ಮಾಂಸಾಹಾರ ಸೇವಿಸಿ ದೇಗುಲಕ್ಕೆ ಹೋದರೆ ತಪ್ಪೇನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದು, ನನ್ನ ಊಟದ ಬಗ್ಗೆ ಪ್ರಶ್ನೆ ಮಾಡಲು ನೀವು ಯಾರು? ಎಂದು ಆಹಾರದ ಸ್ವಾತಂತ್ರ್ಯದ ಕುರಿತು ಧ್ವನಿ ಎತ್ತಿದ್ದಾರೆ.
ಸಿದ್ದರಾಮಯ್ಯನವರನ್ನು ವಿರೋಧಿಸುವ ಭರದಲ್ಲಿ ಬಿಜೆಪಿ ನಾಯಕರು ಮಾಂಸಾಹಾರಿಗಳ ಆಹಾರ ಸ್ವಾತಂತ್ರ್ಯವನ್ನು ಪ್ರಶ್ನಿಸುತ್ತಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿವೆ. ನಮ್ಮ ಆಹಾರವನ್ನು ಪ್ರಶ್ನಿಸಲು ನೀವು ಯಾರು ಎನ್ನುವ ಪ್ರಶ್ನೆಗಳು ಕೂಡ ತೀವ್ರತೆ ಪಡೆದುಕೊಳ್ಳುತ್ತಿದೆ.
ದೇಶದ ಬಹುಪಾಲು ಮಾಂಸಾಹಾರಿಗಳೇ ಇದ್ದರೂ ಮಾಂಸಾಹಾರಿಗಳ ಆಹಾರದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಆಹಾರದ ವಿಚಾರಗಳನ್ನೂ ರಾಜಕೀಯಗೊಳಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆಗಳು ಇದೀಗ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka