ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಮಂಗಳೂರಿನಲ್ಲಿ ಸಿದ್ದರಾಮಯ್ಯ ತಿರುಗೇಟು: ನಳಿನ್ ಜೋಕರ್, ವಿದೂಷಕ ಎಂದ ಮಾಜಿ ಸಿಎಂ

ಮಂಗಳೂರು: ನಗರದ ಕುದ್ರೋಳಿ ದೇವಸ್ಥಾನಕ್ಕೆ ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಉತ್ತರ ಕೊಡಲ್ಲ. ಅವರು ಒಂಥರಾ ಜೋಕರ್ ಇದ್ದ ಹಾಗೆ, ಉತ್ತರ ಕೊಡಲ್ಲ. ಅವರು ಬಹಳ ಬಾಲಿಶವಾಗಿ ಮತ್ತು ಬೇಜವಾಬ್ದಾರಿಯಿಂದ ಮಾತನಾಡ್ತಾರೆ. ಬಿಜೆಪಿಯಲ್ಲಿ ಅವರೊಬ್ಬ ವಿದೂಷಕ ಇದ್ದಂತೆ. ಅವರ ಬಗ್ಗೆ ಮಾತನಾಡಲ್ಲ ಅಂದರು.
ಸಿದ್ದರಾಮಯ್ಯರನ್ನು ಚುನಾವಣೆಗೂ ಮುನ್ನ ಜೈಲಿಗೆ ಕಳಿಸ್ತೇವೆ ಅನ್ನೋ ನಳಿನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜೈಲಿಗೆ ಕಳಿಸೋದು ಕೋರ್ಟ್ ಗಳು, ಬಿಜೆಪಿಯವರಲ್ಲ. ಅವರು ವಿಚಾರಣೆ ಮಾಡಿ ಕೋರ್ಟ್ ಗೆ ಕಳಿಸೋದು. ಕೋರ್ಟ್ ಗೆ ಸಂಬಂಧಿಸಿದ್ದು. ನಳಿನ್ ಪೆದ್ದಾಗಿ ಮಾತನಾಡ್ತಾರೆ. ಅವರ ಬಗ್ಗೆ ನಾನು ಮಾತನಾಡಲ್ಲ, ಕಾನೂನು ಅವರಿಗೆ ಗೊತ್ತಿಲ್ಲ ಅಂದರು.
ಇನ್ನು ನಾನು ಅವರಿಗೆ ನಾಯಿ ಮರಿ ಅಂಥ ಹೇಳಿಲ್ಲ. ಧೈರ್ಯ ಇರಬೇಕು ಅಂದೆ. ನಮಗೆ ರಾಜ್ಯದ ಹಿತ ಮುಖ್ಯ. ಕೇಂದ್ರದ ಜೊತೆ ಧೈರ್ಯವಾಗಿ ಮಾತನಾಡಿ ಅಂದೆ. ಧೈರ್ಯವಾಗಿ ಇರಬೇಕು, ನಾಯಿ ಮರಿ ಥರ ಇರಬಾರದು ಅಂದೆ. ಇದರಲ್ಲಿ ತಪ್ಪು ಏನು ಇದೆ? ಇದು ಅನ್ ಪಾರ್ಲಿಮೆಂಟ್ರಿನಾ? ನನಗೆ ಟಗರು, ಹುಲಿಯಾ ಅಂತೆಲ್ಲಾ ಕರೀತಾರೆ, ಅದು ಅನ್ ಪಾರ್ಲಿಮೆಂಟರಿ ಅಲ್ಲ ಅಂದರು. ಯಡಿಯೂರಪ್ಪನನ್ನ ರಾಜಾ ಹುಲಿ ಅಂತಾರೆ, ಅದು ಅನ್ ಪಾರ್ಲಿಮೆಂಟರಿಯಾ? ಯಡಿಯೂರಪ್ಪ ಹುಲೀನಾ? ನಾಯಿ ಅನ್ನೋದು ನಂಬಿಕೆ ಇರೋ ಪ್ರಾಣಿ, ಧೈರ್ಯ ಇರಬೇಕು ಅಂದೆ. ನಮ್ಮ ಪಾಲನ್ನ ಕೇಂದ್ರದ ಜೊತೆ ಧೈರ್ಯವಾಗಿ ಕೇಳಿ ಅಂದರು.
ಉಳ್ಳಾಲ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಸುದ್ದಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಅಲೆಮಾರಿ ರಾಜಕಾರಣಿ ಅಲ್ಲ. ಕೋಲಾರ, ಬಾದಾಮಿಯವರು ಕರೀತಾ ಇದ್ದಾರೆ. ವರುಣಾದಲ್ಲೂ ಕರೀತಾ ಇದಾರೆ, ಅರ್ಜಿ ಹಾಕುವಾಗ ಹೈ ಕಮಾಂಡ್ ಗೆ ಬಿಟ್ಟಿದ್ದೇನೆ. ನಾನು ಉಳ್ಳಾಲ ನಿಲ್ಲೋದೆಲ್ಲ ಇಲ್ಲ, ಹೈಕಮಾಂಡ್ ಗೆ ಬಿಟ್ಟಿದ್ದು. ಈ ಸರ್ಕಾರದಲ್ಲಿ ಬಹಳಷ್ಟು ಭ್ರಷ್ಟಾಚಾರ ಆಗ್ತಿದೆ. ಇದು 40% ಸರ್ಕಾರ. ಗುತ್ತಿಗೆದಾರರು ಲಂಚ ಕೊಡಲು ಆಗದೇ ಸಂತೋಷ್ ಸತ್ತು ಹೋದ. ಮೊನ್ನೆ ಪ್ರದೀಪ್ ಅನ್ನೋರು ಸತ್ತೋದ್ರು, ಇನ್ನೊಬ್ಬರು ದಯಾಮರಣ ಕೇಳಿದ್ರು. ಈ ಸರ್ಕಾರದಲ್ಲಿ ದುಡ್ಡು ಕೊಟ್ಟರೆ ಎನ್ ಓಸಿ, ಅಭಿವೃದ್ಧಿ ಅನ್ನುವಂತಾಗಿದೆ ನಾನು ನಳಿನ್ ಕುಮಾರ್ ಕಟೀಲ್ ಗೆ ರಿಪ್ಲೈ ಮಾಡಲ್ಲ ಅಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw