ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಬಿಜೆಪಿ ಸದಸ್ಯರು!

siddaramaiha
15/09/2021

ಬೆಂಗಳೂರು: ಬೆಲೆಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಕಲಾಪದ ವೇಳೆ ಆಡಳಿತ ಹಾಗೂ ವಿಪಕ್ಷಗಳ ಮಧ್ಯೆ ಗದ್ದಲ, ಕೋಲಾಹಲವೇ ನಡೆದಿದ್ದು, ಬೆಲೆ ಏರಿಕೆ ವಿಚಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸುತ್ತಿದ್ದಂತೆಯೇ ಆಡಳಿತ ಪಕ್ಷ ಬಿಜೆಪಿ ಸದಸ್ಯರು ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ವಸ್ತುಗಳ ಬೆಲೆ ಏರಿಕೆಯಾಗಿದೆ. ನಮ್ಮನ್ನು ಕೇಳುತ್ತಾರೆ ಅದಕ್ಕಾಗಿ ನಾವು ಇಲ್ಲಿ ಕೇಳುತ್ತೇವೆ. ಆದರೆ ಸದನದಲ್ಲಿ ಬೆಲೆ ಏರಿಕೆಯ ಅಂಶವನ್ನು ಪ್ರಸ್ತಾಪಿಸಬಾರದೇ? ಎಂದು ಸಿದ್ದರಾಮಯ್ಯ ಆಡಳಿತ ಪಕ್ಷ ಬಿಜೆಪಿಯನ್ನು ಪ್ರಶ್ನಿಸಿದರು.

ಮುಂದುವರಿದು ಮಾತನಾಡಿದ ಅವರು, ಕನಿಷ್ಠ 20 ದಿನವಾದರೂ ಅಧಿವೇಶನ ನಡೆಸಬೇಕಾಗಿದೆ. ಇಲ್ಲದಿದ್ದರೆ ವಿಷಯ ಪ್ರಸ್ತಾಪ ಮಾಡುವುದಕ್ಕೆ ಸಮಯವೇ ಸಿಗುವುದಿಲ್ಲ. ನಿಮ್ಮ ನಿರ್ಲಕ್ಷ್ಯದಿಂದ ವಿಧಾನಸಭೆ ಮಹತ್ವ ಹೋಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಧರಣಿ ನಡೆಸಿದ ನಮ್ಮನ್ನು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಆದರೆ ವಾಜಪೇಯಿಯವರು ಪಾರ್ಲಿಮೆಂಟ್‌ಗೆ ಎತ್ತಿನಗಾಡಿಯಲ್ಲಿ ಬಂದಿದ್ದರು. ಆಗ ಪೆಟ್ರೋಲ್ ಬೆಲೆ 7 ಪೈಸೆ ಮಾತ್ರ ಏರಿಕೆಯಾಗಿತ್ತು. 7 ಪೈಸೆ ಹೆಚ್ಚಾಗಿದ್ದಕ್ಕೆ ಎತ್ತಿನಗಾಡಿಯಲ್ಲಿ ಬಂದಿದ್ದರು. ಆಗ ‘ಕ್ರಿಮಿನಲ್ ಲೂಟ್’ ಎಂದು ವಾಜಪೇಯಿ ಹೇಳಿದ್ದರು. ಈಗ ನಾನು ಯಾವ ಪದ ಬಳಸಬೇಕು ಎಂದು ಸಿದ್ದರಾಮಯ್ಯ  ಪ್ರಶ್ನಿಸಿದರು.

ಆಯಿಲ್ ಬಾಂಡ್ ಖರೀದಿಸಿದ್ದು ಆ ಸಮಯಕ್ಕೆ ಸರಿಯಿತ್ತು. ಆದರೆ ಈಗ ಕಚ್ಚಾತೈಲ ಬೆಲೆ ಕಡಿಮೆಯಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಅಬಕಾರಿ ಸುಂಕವನ್ನು ಹೆಚ್ಚಳ ಮಾಡುತ್ತಲೇ ಹೋಗುತ್ತಿದ್ದಾರೆ. ಹೀಗಾಗಿಯೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಡೀಸೆಲ್ ಬೆಲೆ ಏರಿಕೆಯಾದರೆ ಅಗತ್ಯವಸ್ತುಗಳ ಬೆಲೆ ಏರಿಕೆಯಾಗುತ್ತದೆ, ಹಣದುಬ್ಬರ ಆಗುತ್ತದೆ. ಲಕ್ಷಾಂತರ ಜನ ದ್ವಿಚಕ್ರ ವಾಹನದಲ್ಲೇ ಕೆಲಸಕ್ಕೆ ಹೋಗ್ತಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆಯಾದರೆ ಅವರ ಪರಿಸ್ಥಿತಿ ಏನಾಗಬೇಕು ಎಂದು ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆತ್ತಿಕೊಂಡರು.

ಸಿದ್ದರಾಮಯ್ಯನವರ ನೇರ ಪ್ರಶ್ನೆಗೆ ಉತ್ತರಿಸುವ ಬದಲು ಆಡಳಿತ ಪಕ್ಷದ ಸದಸ್ಯರು 70 ವರ್ಷ ಕಾಂಗ್ರೆಸ್‌ ನವರು ದೇಶವನ್ನು ಲೂಟಿ ಹೊಡೆದಿದ್ದಾರೆ ಎಂದು ಹೇಳುವ ಮೂಲಕ ಗದ್ದಲ ಸೃಷ್ಟಿಸಿದರು. ಬೆಲೆ ಏರಿಕೆ ವಿಷಯ ಚರ್ಚೆ ವೇಳೆ ಗದ್ದಲ, ಕೋಲಾಹಲ ಹೆಚ್ಚಿದಂತೆ ಕಲಾಪದ ಸದಸ್ಯರನ್ನು ಶಾಂತಗೊಳಿಸಲು ಯತ್ನಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಊಟದ ವಿರಾಮ ಘೋಷಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಬಿಜೆಪಿ ಸದಸ್ಯರು!

6 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ ಆರೋಪಿಯನ್ನು ಎನ್ ಕೌಂಟರ್ ಮಾಡುತ್ತೇವೆ | ತೆಲಂಗಾಣ ಸಚಿವ ಬಹಿರಂಗ ಹೇಳಿಕೆ

ಬಸ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು: ಐವರು ಸಜೀವ ದಹನ  

ವರದಕ್ಷಿಣೆ ತರಲಿಲ್ಲ ಎಂದು ಮಹಿಳೆಗೆ ವಿಷ ಉಣಿಸಿ ಕೊಂದ ಪಾಪಿಗಳು!

ಮಸೀದಿ, ಚರ್ಚ್, ದೇವಸ್ಥಾನ ಅಂತ ಇಲ್ಲ,  ಯಾವುದೇ ಇದ್ದರೂ ತೆರವು ಮಾಡುತ್ತೇವೆ | ರಾಮನಗರ ಡಿಸಿ

ತಂದೆಯನ್ನು ಕೊಂದು, ಕುಡಿದು ಬಿದ್ದು ಸತ್ತ ಎಂದು ನಂಬಿಸಿದ ಪುತ್ರ | ಪುತ್ರನ ಹೈಡ್ರಾಮ ಬಯಲಾಗಿದ್ದು ಹೇಗೆ ಗೊತ್ತಾ?

“ಮಗಳನ್ನು ಹೇಗಾದರೂ ಬದುಕಿಸಿ” ಎಂದು ಅತ್ತು ಗೋಗರೆದರೂ ಬಾಗಿಲು ತೆರೆಯದ ಆಸ್ಪತ್ರೆ | 5 ವರ್ಷದ ಬಾಲಕಿ ಸಾವು

ಇತ್ತೀಚಿನ ಸುದ್ದಿ

Exit mobile version