ಸಿದ್ದರಾಮಯ್ಯರನ್ನು ಕಾಯದೇ ಯಾತ್ರೆ ಆರಂಭಿಸಿದ ಡಿಕೆಶಿ:ಸಿದ್ದು, ರಾಗಾ ಹೆಸರಲ್ಲಿ ದೇವರಿಗೆ ಅರ್ಚನೆ
ಚಾಮರಾಜನಗರ: ಸಿದ್ದರಾಮಯ್ಯ ಅವರನ್ನು ಕಾಯದೇ ಡಿ.ಕೆ.ಶಿವಕುಮಾರ್ ಬಸ್ ಯಾತ್ರೆ ಆರಂಭಿಸಿದ ಘಟನೆ ಚಾಮರಾಜನಗರದಲ್ಲಿ ನಡೆಯಿತು.
ಹೌದು.., ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಂದು ನಡೆದ ಕಾಂಗ್ರೆಸ್ ನ ಪ್ರಜಾ ಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಚಾಮರಾಜನಗರದಲ್ಲಿ ಇಬ್ಬರೂ ಪೂಜೆ ಸಲ್ಲಿಸಿ ರೋಡ್ ಶೋ ನಡೆಸಬೇಕಿತ್ತು. ಆದರೆ, ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ಬರುವುದು ಒಂದು ಮುಕ್ಕಾಲು ತಾಸು ತಡವಾದ್ದರಿಂದ ಡಿಕೆಶಿ, ಸುರ್ಜೇವಾಲ, ಆರ್.ಧ್ರುವನಾರಾಯಣ್ ಹಾಗೂ ಇನ್ನಿತರ ನಾಯಕರು ಬಸ್ ಯಾತ್ರೆ ಆರಂಭಿಸಿ ಚಾಮರಾಜೇಶ್ವರನಿಗೆ ಪೂಜೆ ಸಲ್ಲಿಸಿ ಬಸ್ ಯಾತ್ರೆ ಮೂಲಕ ವೇದಿಕೆ ತಲುಪಿದರು. ಪೂಜೆ ವೇಳೆ ಡಿಕೆಶಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ವರಿಷ್ಟರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.
ಇವರು ಪೂಜೆ ಸಲ್ಲಿಸಿ ತೆರಳುತ್ತಿದ್ದಂತೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಸಿದ್ದರಾಮಯ್ಯ ಪ್ರವಾಸಿ ಮಂದಿರದಲ್ಲಿ ಸ್ವಲ್ಪ ಹೊತ್ತು ವಿರಮಿಸಿ ವೇದಿಕೆಗೆ ನೇರವಾಗಿ ಬಂದರು. ಸಿದ್ದರಾಮಯ್ಯ ಅವರೊಟ್ಟಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಇದ್ದರು.
ಬಿಜೆಪಿ ಬರುವುದು ಅವರ ಹಗಲುಕನಸು: ಬಿಜೆಪಿ ಅವರು ಮತ್ತೇ ಸರ್ಕಾರ ರಚಿಸುವುದು ಹಗಲುಗನಸಾಗಿದೆ, ಯಾವುದೇ ಕಾರಣಕ್ಕೂ ಅವರು ಅಧಿಕಾರಕ್ಕೆ ಬರಲ್ಲ, ಈ ಬಾರಿ ಸರ್ಕಾರಕ್ಕೆ ಬರುವುದೇ ಕಾಂಗ್ರೆಸ್ ಸರ್ಕಾರ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು, ಸಚಿವ ಸುಧಾಕರ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಸಿದ್ದರಾಮಯ್ಯ, ಚಾಮರಾಜನಗರದಲ್ಲಿ 36 ಮಂದಿ ಆಮ್ಲಜನಕ ಇಲ್ಲದೇ ಅಸುನೀಗಿದ್ದನ್ನು ಮುಚ್ಚಿಹಾಕಿದ್ದಾರೆ, ಸರ್ಕಾರ ಇರುವುದು ಯಾರದ್ದು, 36 ಮಂದಿ ಸಾವಿಗೆ ಯಾರು ಕಾರಣ..? ಆರೋಗ್ಯ ಮಂತ್ರಿಯಾಗಿರಲು ಲಾಯಕ್ಕಾ?? ಅವನು ನೇಣು ಹಾಕಿಕೊಳ್ಳುವುದು ಬೇಡ, ಅವರ ಮೇಲಿನ ವಿರುದ್ಧ ಎಲ್ಲಾದರ ಬಗ್ಗೆ ತನಿಖೆ ಮಾಡಲಿ ಆಗ ಗೊತ್ತಾಗಲಿದೆ, ತನಿಖೆ ಮಾಡಲು ನಾವೇನೂ ಅಧಿಕಾರದಲ್ಲಿದ್ದೀವಾ ಎಂದು ಕಿಡಿಕಾರಿದರು.
ಜನಸಾಗರ: ಇನ್ನು, ಪ್ರಜಾಧ್ವನಿ 3 ತಾಸು ತಡವಾಗಿ ಆರಂಭವಾದರೂ ಕೈ ಕಾರ್ಯಕರ್ತರು ನೆಚ್ಚಿನ ನಾಯಕರಿಗಾಗಿ ಕಾದು ಕುಳಿತಿದ್ದರು. ಅಂದಾಜು, 15-20 ಸಾವಿರ ಮಂದಿ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಸಿದ್ದರಾಮಯ್ಯ, ಡಿಕೆಶಿ ಜೊತೆಗೆ ರಂದೀಪ್ ಸುರ್ಜೇವಾಲ, ಬಿ.ಕೆ.ಹರಿಪ್ರಸಾದ್, ಸತೀಶ್ ಜಾರಕಿಹೊಳಿ ಸೇರಿದಂತೆ ಜನಪ್ರತಿನಿಧಿಗಳಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw