ಸಿದ್ದರಾಮೋತ್ಸವದ ವೇಳೆ ಕಾಲ್ತುಳಿತಕ್ಕೆ ವೃದ್ಧ ಬಲಿ - Mahanayaka

ಸಿದ್ದರಾಮೋತ್ಸವದ ವೇಳೆ ಕಾಲ್ತುಳಿತಕ್ಕೆ ವೃದ್ಧ ಬಲಿ

swami gowda
09/08/2022

ಮಂಡ್ಯ: ಸಿದ್ದರಾಮೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ ವೃದ್ಧರೊಬ್ಬರು ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.


Provided by

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳುಕುಪ್ಪೆ ಸ್ವಾಮಿ ಗೌಡ (72) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಆಗಸ್ಟ್ 2ರಂದು ನಡೆದ ಸಿದ್ದರಾಮೋತ್ಸವ ಕಾರ್ತಕ್ರಮಕ್ಕೆ ಸ್ವಾಮಿಗೌಡ ತೆರಳಿದ್ದರು.

ಆಗಸ್ಟ್ 3ರಂದು ದಾವಣಗೆರೆ ಸಮಾವೇಶದ ಸ್ಥಳದಿಂದ ಸ್ವಾಮಿ ಗೌಡ ನಾಪತ್ತೆಯಾಗಿದ್ದರೆನ್ನಲಾಗಿದೆ. ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತದಲ್ಲಿ ಸ್ವಾಮಿಗೌಡ ಸಾವನ್ನಪ್ಪಿದ್ದು, ಅಂದೇ ದಾವಣಗೆರೆಯಲ್ಲಿ ಶವ ಪತ್ತೆಯಾಗಿತ್ತು ಎಂದು ಹೇಳಲಾಗುತ್ತಿದೆ.


Provided by

ಘಟನೆ ಸಂಬಂಧ ಕುಟುಂಬಸ್ಥರು ತಮ್ಮ ಊರಿನ ಠಾಣೆಗೆ ನಾಪತ್ತೆ ಬಗ್ಗೆ ದೂರು ನೀಡಿದ್ದರು.  ಇದೀಗ ಕುಟುಂಬಸ್ಥರು ದಾವಣಗೆರೆಗೆ  ಆಗಮಿಸಿ ಮೃತರ ಗುರುತು ಪತ್ತೆ ಹಚ್ಚಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗುವುದು ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ