ಸಿದ್ದರಾಮೋತ್ಸವಕ್ಕೆ 6 ಲಕ್ಷಕ್ಕೂ ಅಧಿಕ ಜನರ ಆಗಮನ: ಊಟದ ಅಭಾವ, ರಾಹುಲ್ ಗೂ ತಟ್ಟಿದ ಟ್ರಾಫಿಕ್ ಜಾಮ್ ಬಿಸಿ - Mahanayaka

ಸಿದ್ದರಾಮೋತ್ಸವಕ್ಕೆ 6 ಲಕ್ಷಕ್ಕೂ ಅಧಿಕ ಜನರ ಆಗಮನ: ಊಟದ ಅಭಾವ, ರಾಹುಲ್ ಗೂ ತಟ್ಟಿದ ಟ್ರಾಫಿಕ್ ಜಾಮ್ ಬಿಸಿ

davanagere
03/08/2022

ಬೆಂಗಳೂರು: ಸಿದ್ದರಾಮೋತ್ಸವಕ್ಕೆ ಜನಸಾಗರವೇ ಹರಿದು ಬಂದಿದ್ದು, 6 ಲಕ್ಷ ಜನರಿಗೆ ಅಡುಗೆ ಮಾಡಲಾಗಿದ್ದು, ಆದ್ರೆ, ಆರು ಲಕ್ಷಕ್ಕೂ ಅಧಿಕ ಜನರು ಆಗಮಿಸಿದ್ದು, ಊಟದ ವ್ಯವಸ್ಥೆ ನಿರ್ವಹಿಸಲು ಅಡುಗೆ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.


Provided by

ಕಾರ್ಯಕ್ರಮ ನಡೆಸುತ್ತಿರುವ ಎರಡು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಬಿಸಿಬೇಳೆ ಬಾತ್, ಪಲಾವ್, ಮೊಸರನ್ನ, ಮೈಸೂರು ಪಾಕ್ ಹಾಗೂ ಲಾಡು ತಿನಿಸುಗಳು ಊಟದ ಮೆನುವಿನಲ್ಲಿದೆ. ಸುಮಾರು ಐದು ಲಕ್ಷ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಂಗಳೂರಿನಿಂದ ಬಂದ 2500 ಬಾಣಸಿಗರು ಊಟ ತಯಾರಿ ಮಾಡಿದ್ದಾರೆ.

ಜನಸಾಗರದಿಂದಾಗಿ ರಾಹುಲ್ ಗಾಂಧಿ ಕೂಡ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿದ್ದು, ಕಾರ್ಯಕ್ರಮಕ್ಕೆ ಅವರು ತಡವಾಗಿ ಆಗಮಿಸಿದ ಘಟನೆ ಕೂಡ ನಡೆಯಿತು. ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಹೈಕಮಾಂಡ್ ಗೆ ಶಾಕ್ ಆಗಿದೆ.


Provided by

ಇಂದು ಬೆಳಗ್ಗೆ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿ, ಡಾ.ಶಿವಮೂರ್ತಿ ಮುರುಘಾ ಶರಣರು ಆಶೀರ್ವಾದ ಪಡೆದ ರಾಹುಲ್ ಗಾಂಧಿ, ಬಳಿಕ ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟರು. ಆದರೆ, ಕಾರ್ಯಕ್ರಮದಿಂದ ದಾವಣಗೆರೆಯಲ್ಲಿ ಉಂಟಾಗಿರುವ ಭಾರಿ ಟ್ರಾಫಿಕ್ ಜಾಮ್ನಲ್ಲಿ ರಾಹುಲ್ ಸಿಲುಕಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ