ಸಿದ್ದರಾಮೋತ್ಸವದಿಂದ ನಾವು ನಿದ್ದೆ, ಊಟ, ತಿಂಡಿ ಏನೂ ಮಾಡಿಲ್ಲ: ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: ಸಿದ್ದರಾಮೋತ್ಸವದಿಂದ ಬಿಜೆಪಿ ನಾಯಕರು ಆತಂಕಕ್ಕೊಳಗಾಗಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಹೌದು ನಾವು ನಿದ್ದೆ, ಊಟ ತಿಂಡಿ ಏನೂ ಮಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದರಾಮೋತ್ಸವದಂತಹ ನೂರು ಕಾರ್ಯಕ್ರಮ ನಾವು ಮಾಡಿದ್ದೇವೆ. ಕಾಂಗ್ರೆಸ್ ನವರು ಇತ್ತೀಚೆಗೆ ಒಂದು ಕಾರ್ಯಕ್ರಮ ಮಾಡಿರುವುದೇ ಅವರಿಗೆ ದೊಡ್ಡದು ಎಂದರು.
ಕಾಂಗ್ರೆಸ್ ಪಕ್ಷದಲ್ಲಿದ್ದ ಆಂತರಿಕ ಗೊಂದಲ ಇದರಿಂದ ಜಾಸ್ತಿಯಾಗಿದೆ. ರಾಹುಲ್ ಗಾಂಧಿ ಮುಂದೆ ತೋರಿಸೋಕೆಗೆ ಅಪ್ಪಿಕೊಂಡಿದ್ದಾರಷ್ಟೇ. ನಾಯಕರ ಮುಂದೆ ಸರ್ಕಸ್, ಡ್ಯಾನ್ಸ್ ಮಾಡಿ ಎಂದು ಹೇಳುವ ಸ್ಥಿತಿ ಕಾಂಗ್ರೆಸ್ ನದ್ದು ಎಂದು ಅವರು ವ್ಯಂಗ್ಯವಾಡಿದರು.
ಕಾಂಗ್ರೆಸ್ ನವರ ಹಾಗೇ ಕನಸು ಯಾರಿಗೂ ಬೀಳಲ್ಲ. ಅಧಿಕಾರ ನಡೆಸುತ್ತಿದ್ದ ಇವರನ್ನು ಅಯೋಗ್ಯರು ಎಂದು ಜನ ಮನೆಗೆ ಕಳುಹಿಸಿದ್ದಾರೆ. ಬಡವರು, ಹಿಂದುಳಿದವರ ಪರ ಇಲ್ಲ ಎಂದು ಕಿತ್ತು ಬಿಸಾಕಿದ್ದಾರೆ. ಆದರೂ ಅಧಿಕಾರದ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನವರು ಭ್ರಮೆಯಿಂದ ಹೊರ ಬರಬೇಕು ಎಂದು ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka