ಸಿದ್ದರಾಮೋತ್ಸವ ಡಿ.ಕೆ.ಸಹೋದರರನ್ನು ಚಿಂತೆಗೀಡು ಮಾಡಿತೇ?: ಡಿ.ಕೆ.ಸುರೇಶ್ ಹೇಳಿದ್ದೇನು?
![d k brothers](https://www.mahanayaka.in/wp-content/uploads/2022/07/d-k-brothers.jpg)
ಬೆಂಗಳೂರು: “ಯಾರನ್ನೋ ಬಿಂಬಿಸುವ, ವೈಭವೀಕರಿಸುವ ನಿಟ್ಟಿನಲ್ಲಿ ಕೆಲಸವಾಗಬಾರದು” ಎಂದು ಸಿದ್ದರಾಮೋತ್ಸವಕ್ಕೆ ಸಂಸದ ಡಿ.ಕೆ.ಸುರೇಶ್ ಟಾಂಗ್ ನೀಡಿದ್ದು, ಕಾಂಗ್ರೆಸ್ ನೊಳಗೆ ಸಿದ್ದರಾಮೋತ್ಸವ ಪಕ್ಷದೊಳಗಿನ ಸಿಎಂ ಸ್ಥಾನಾಕಾಂಕ್ಷಿಗಳನ್ನು ಚಿಂತೆಗೀಡು ಮಾಡಿತೇ? ಎನ್ನುವ ಅನುಮಾನಗಳಿಗೆ ಕಾರಣವಾಗಿದೆ.
ಸಿದ್ದರಾಮಯ್ಯ ಅವರ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಇದನ್ನು ಹಲವರು ಸಿದ್ದರಾಮೋತ್ಸವ ಎಂದು ಕರೆಯುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಇಷ್ಟ ಇದೆಯೋ ಇಲ್ಲವೋ ಆದರೆ ಆಗಾಗ ವ್ಯಕ್ತಿಪೂಜೆ ನಡೆಯುತ್ತಲೇ ಇರುತ್ತದೆ. ಇದನ್ನು ಸಿದ್ದರಾಮೋತ್ಸವ ಎಂದು ಆಚರಿಸಲಾಗುತ್ತಿದೆ ಎಂಬುದನ್ನು ಸಮಿತಿ ಸದಸ್ಯರು ಮರೆಯುವಂತಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ತೋಡಿಕೊಂಡರು.
ಯಾರನ್ನೋ ಬಿಂಬಿಸುವ, ವೈಭವೀಕರಿಸುವ ನಿಟ್ಟಿನಲ್ಲಿ ಕೆಲಸವಾಗಬಾರದು. ಇದರಿಂದ ಚುನಾವಣೆ ವರ್ಷದಲ್ಲಿ ನಾಯಕತ್ವದಲ್ಲಿ ಸಮಸ್ಯೆ ಬರಬಹುದು. ಪಕ್ಷಕ್ಕೆ ತೊಂದರೆಯುಂಟಾಗಲೂಬಹುದು. ಆ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka