ಸಿದ್ದು ಪ್ರಮಾಣ ವಚನ: ಮೈ ಮೇಲೆಲ್ಲಾ ಸಿದ್ದು, ಹುಲಿಯಾ ಎಂದು ಬರೆಸಿಕೊಂಡ ಅಭಿಮಾನಿ
ಚಾಮರಾಜನಗರ: ರಾಜ್ಯದ ಸಿಎಂ ಆಗಿ ಗದ್ದುಗೆ ಏರಿರುವ ಸಿದ್ದರಾಮಯ್ಯ ಅವರಿಗೆ ವಿಶೇಷವಾಗಿ ಶುಭ ಕೋರುವ ಸಲುವಾಗಿ ಕೊಳ್ಳೇಗಾಲದ ಬಸ್ತಿಪುರ ಗ್ರಾಮದ ಮಲ್ಲೇಶ್ ಎಂಬವರು ಬಣ್ಣಗಳ ಮೊರೆ ಹೋಗಿದ್ದಾರೆ.
ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ದಿನವಾದ ಇಂದು ತನ್ನ ಮೈಮೇಲೆಲ್ಲಾ ಹುಲಿಯಾ, ಸಿಎಂ ಸಿದ್ದರಾಮಯ್ಯ, ಸಿಎಂ ಸಿದ್ದು ಎಂದು ಬರೆಸಿಕೊಂಡು ಅಭಿಮಾನ ಮೆರೆದಿದ್ದಾರೆ.
ಚಾಮರಾಜನಗರ ಜಿಲ್ಲೆಯಿಂದಲೂ ಸಾವಿರಾರು ಮಂದಿ ಅಭಿಮಾನಿಗಳು ಪ್ರಮಾಣವಚನ ಕಾರ್ಯಕ್ರಮ ನೋಡಲು ರಾಜಧಾನಿಗೆ ಲಗ್ಗೆ ಇಟ್ಟಿದ್ದಾರೆ. ಚಾಮರಾಜನಗರದ ಮೇಲೆ ವಿಶೇಷ ಅಭಿಮಾನ ಇಟ್ಟುಕೊಂಡಿರುವ ಸಿದ್ದುಗೆ ಗಡಿಜಿಲ್ಲೆಯಲ್ಲಿ ಅಪಾರ ಅಭಿಮಾನಿಗಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw