ಸಿದ್ದಗಂಗಾ ಮಠದ ಬಳಿಯ ಹೊಂಡದಲ್ಲಿ ವಿದ್ಯಾರ್ಥಿಯ ಶವ ಪತ್ತೆ: ಕಾರಣ ನಿಗೂಢ
ತುಮಕೂರು: ಸಿದ್ದಗಂಗಾ ಮಠದಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೋರ್ವನ ಮೃತದೇಹ ಮಠದ ಹಿಂಭಾಗದಲ್ಲಿರುವ ರಾಮದೇವರ ಬೆಟ್ಟದ ಮೇಲಿನ ಹೊಂಡದಲ್ಲಿ ಭಾನುವಾರ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಸಿದ್ಧಗಂಗಾ ಮಠದಲ್ಲಿರುವ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ 16 ವರ್ಷ ವಯಸ್ಸಿನ ಗಗನ್ ಗೌಡ ಮೃತ ಬಾಲಕ ಎಂದು ಗುರುತಿಸಲಾಗಿದ್ದು, ಬಾಲಕ ನೆಲಮಂಗಲ ತಾಲೂಕಿನ ಹೆಸರಘಟ್ಟ ಸಮೀಪದ ಕಾಕೋಳ ಗ್ರಾಮದ ಪ್ರಕಾಶ್ ಎಂಬವರ ಪುತ್ರನಾಗಿದ್ದು ಕಳೆದ 4 ವರ್ಷಗಳಿಂದ ಮಠದಲ್ಲೇ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಜುಲೈ 16ರಿಂದ ತಮ್ಮ ಮಗ ನಾಪತ್ತೆಯಾಗಿದ್ದಾನೆ ಎಂದು ಕ್ಯಾತ್ಸಂದ್ರ ಠಾಣೆಯಲ್ಲಿ ತಂದೆ ಪ್ರಕಾಶ್ ಶನಿವಾರ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದರೂ ಬಾಲಕನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಭಾನುವಾರ ಬೆಳಗ್ಗೆ ಕೆಲವರು ನೀರಿನ ಹೊಂಡದಲ್ಲಿ ಮೃತದೇಹ ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಹೇಳಲಾಗಿದೆ. ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಗುರುತಿಸಿದ್ದಾರೆ.
ಇನ್ನೂ ಬಾಲಕ ಹೇಗೆ ಸಾವನ್ನಪ್ಪಿದ್ದಾನೆ ಎನ್ನುವ ಬಗ್ಗೆ ಇನ್ನೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಸದ್ಯ ಪೊಲೀಸರು ಬಾಲಕನ ಸಾವಿನ ಕಾರಣ ಪತ್ತೆ ಮಾಡಲು ಯೋಜನೆ ರೂಪಿಸಿದ್ದು, ಪೊಲೀಸರ ತನಿಖೆಯ ಬಳಿಕ ಸತ್ಯ ತಿಳಿದು ಬರಬೇಕಿದೆ.
ಇನ್ನಷ್ಟು ಸುದ್ದಿಗಳು…
ಅಜ್ಜನ ಕೈ ಬಿಡಿಸಿಕೊಂಡು ರಸ್ತೆಗೆ ಓಡಿದ 5ರ ಬಾಲಕಿ | ಕೆಲವೇ ಕ್ಷಣದಲ್ಲಿ ನಡೆದಿತ್ತು ಅನಾಹುತ!
ಜೊತೆ ಜೊತೆಯಲಿ ಧಾರಾವಾಹಿ ವೀಕ್ಷಕರಿಗೆ ಸಿಹಿ ಸುದ್ದಿ ನೀಡಿದ ಅನು ಸಿರಿಮನೆ
ಖ್ಯಾತ ಪೋರ್ನ್ ಸ್ಟಾರ್ ಳ ಮೃತದೇಹ ಕಾರಿನಲ್ಲಿ ಪತ್ತೆ | ಆತ್ಮಹತ್ಯೆಯೋ? ಕೊಲೆಯೋ?
ಜಾಸ್ತಿ ಮಕ್ಕಳು ಮಾಡಿಕೊಳ್ಳಲು ತಾಕತ್ ಇದ್ರೆ ಮಾಡಿಕೊಳ್ತಾರೆ | ಜಮೀರ್ ಹೇಳಿದ್ದೇನು?