ಸಿಡಿಲು ಬಡಿದು ಮರಿ ಆನೆಗಳು ಸೇರಿದಂತೆ 20 ಆನೆಗಳು ದುರಂತ ಸಾವು!
ಗುವಾಹಟಿ: ಸಿಡಿಲು ಬಡಿದು 20 ಆನೆಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಅಸ್ಸಾಮ್ ನ ನಾಗಾನ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಮರಿ ಆನೆಗಳು ಕೂಡ ಇದ್ದ ಆನೆಯ ಹಿಂಡಿಗೆ ಸಿಡಿಲು ಬಡಿದೆ ಎಂದು ಅರಣ್ಯಾಧಿಕಾರಿ ಅಮಿತ್ ಸೈಯ್ಯಾ ತಿಳಿಸಿದ್ದಾರೆ.
ಇಲ್ಲಿನ ಕತಿಯೋಟೋಲಿಯ ಮೀಸಲು ಅರಣ್ಯದೊಳಗೆ ಈ ಘಟನೆ ನಡೆದಿದೆ. ಈ ಪ್ರದೇಶವು ಕಾಡಿನ ಒಳ ಪ್ರದೇಶವಾಗಿದ್ದು, ಈ ಪ್ರದೇಶಕ್ಕೆ ತಲುಪಲು ಅರಣ್ಯ ಸಿಬ್ಬಂದಿ ಒಂದು ದಿನ ತೆಗೆದುಕೊಂಡಿದ್ದಾರೆ.
ಈ ಪ್ರದೇಶದಲ್ಲಿ ನಿನ್ನೆ ರಾತ್ರಿ ಗುಡುಗು ಸಹಿತ ಭಾರೀ ಮಳೆಯಾಗಿತ್ತು. ಈ ವೇಳೆ ಆನೆಗಳು ಸಿಡಿಲು ಬಡಿದು ಸಾವನ್ನಪ್ಪಿವೆ. ಆನೆಗಳ ಮೃತದೇಹ ಎರಡು ಗುಂಪುಗಳಾಗಿ ಬಿದ್ದಿರುವುದು ಪತ್ತೆಯಾಗಿವೆ. ಆನೆಗಳು ಸತ್ತು ಬಿದ್ದಿರುವುದನ್ನು ಕಂಡ ಸ್ಥಳೀಯರು ಅರಣ್ಯಾಧಿಕಾರಿಗಳಿ ಮಾಹಿತಿ ನೀಡಿದ್ದರು.
ಇನ್ನೂ ಘಟನಾ ಸ್ಥಳಕ್ಕೆ ತಲುಪಿದ ಅರಣ್ಯ ಸಿಬ್ಬಂದಿ ಸ್ಥಳವನ್ನು ಪರಿಶೀಲನೆ ನಡೆಸಿದ್ದು, ಆನೆಗಳ ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಸದ್ಯ ಆನೆಗಳ ಮೃತದೇಹ ತೆರವು ಕಾರ್ಯಗಳು ನಡೆಯುತ್ತಿವೆ.