ಸಿಡಿಲು ಬಡಿದು ಗಂಭೀರ ಸ್ಥಿತಿಯಲ್ಲಿದ್ದ 7 ಮಂದಿಯ ಪೈಕಿ ನಾಲ್ವರು ಸಾವು

chikkaballapura
27/04/2021

ಚಿಕ್ಕಬಳ್ಳಾಪುರ:  ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದ 7 ಜನರ ಪೈಕಿ  ನಾಲ್ವರು ಸಾವನ್ನಪ್ಪಿರುವ ಘಟನೆ  ಚಿಕ್ಕಬಳ್ಳಾಪುರ ತಾಲೂಕಿನ ಚಿಂತಾಮಣಿ ತಾಲೂಕಿನ  ಸೋಮಯಾಜಲಹಳ್ಳಿ ಗ್ರಾಮದಲ್ಲಿ  ನಡೆದಿದೆ.

ಏಪ್ರಿಲ್ 22ರಂದು ಚಪ್ಪಡಿ ಮನೆಯೊಂದಕ್ಕೆ ಸಿಡಿಲು ಬಡಿದಿದ್ದು, ಪರಿಣಾಮವಾಗಿ ಮನೆ ಕುಸಿದು ಬಿದ್ದಿದ್ದು,  7 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ 7 ಮಂದಿಯ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ.

ಗೌತಮ್, ಅಂಬರೀಶ್, ಲಾವಣ್ಯ, ವಾಣಿಶ್ರೀ ಮೃತಪಟ್ಟವರು ಎಂದು ತಿಳಿದು ಬಂದಿದೆ.  ಅಂಬರೀಶ್ ಪತ್ನಿ ಗಾಯತ್ರಿ,  ತಂದೆ ಜಗನ್ನ ಹಾಗೂ ಬಾಲಕ ದರ್ಶನ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ..

ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರೆ, ಇನ್ನೂ ಮೂವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇನ್ನೂ ಮೃತರ  ಸಂಬಂಧಿಕರ ರೋದನೆ ಮುಗಿಲು ಮುಟ್ಟಿದೆ. ಸೋಮಯಾಜಲಹಳ್ಳಿ ಗ್ರಾಮದಲ್ಲಿ ಮೌನ ಆವರಿಸಿದೆ.

ಇತ್ತೀಚಿನ ಸುದ್ದಿ

Exit mobile version