ಏಣಿಯಿಂದಾಗಿ ಸಿಕ್ಕಿ ಬಿದ್ದ ಅಡಿಕೆ ಕಳ್ಳ: 70 ಸಾವಿರ ಮೌಲ್ಯದ ಅಡಿಕೆ ವಶಕ್ಕೆ
ಬೆಳ್ತಂಗಡಿ: ನಗರದಲ್ಲಿ ಅಡಿಕೆ ಅಂಗಡಿಗಳಿಂದ ಕಳ್ಳ ತನ ನಡೆಸುತ್ತಿದ್ದ ಪ್ರಕರಣದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ನಗರದ ಸುದೆಮುಗೇರು ನಿವಾಸಿ ಸಂತೋಷ್ ಕುಮಾರ್ ಯಾನರ ಸಂತು(28) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ಸುಮಾರು ಎಪ್ಪತ್ತು ಸಾವಿರ ಮೌಲ್ಯದ ಒಂದು ಕ್ವಿಂಟಾಲ್ ಐವತ್ತು ಕೆ.ಜಿ. ತೂಕದ ಸುಲಿದ ಅಡಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತು ಕಳ್ಳತನಕ್ಕೆ ಉಪಯೋಗಿಸಿದ KA-70-H-9084 ನಂಬರಿನ ಡಿಯೋ ಸ್ಕೂಟರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಮೂರು ಮಾರ್ಗ್ ಬಳಿ ಇರುವ ಪಂಚಾಯತ್ ನೀರಿನ ಟ್ಯಾಂಕ್ ಹೋಗುವ ರಸ್ತೆಯಲ್ಲಿರುವ ಸವಣಾಲು ನಿವಾಸಿ ಜಗದೀಶ್ ಗೌಡ ಮಾಲಕತ್ವದ ಶ್ರೀ ದುರ್ಗಾ ಸುಪಾರಿ ಟ್ರೇಡರ್ಸ್ ಎಂಬ ಹೆಸರಿನ ಅಂಗಡಿಯಿಂದ ಅಡಿಕೆ ಕಳ್ಳತನವಾಗಿತ್ತು. ಈಬಗ್ಗೆ ಮಾಲಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಅದರಂತೆ ಪೊಲೀಸರು ಐಪಿಸಿ 454, 457,380 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಪೊಲೀಸರು ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏಣಿಯಿಂದಾಗಿ ಸಿಕ್ಕಿ ಬಿದ್ದ ಕಳ್ಳ:
ಅಡಿಕೆ ಕಳ್ಳ ಸಿಕ್ಕಿ ಬೀಳುವಲ್ಲಿ ಆತ ಉಪಯೋಗಿಸಿದ ಏಣಿಯೇ ಮಹತ್ವದ ಸುಳಿವು ನೀಡಿತ್ತು. ಪೊಲೀಸರ ಸಲಹೆಯಂತೆ ಕಳ್ಳತನ ನಡೆದ ಅಂಗಡಿಯವರು ಸೇರಿ ಬೆಳ್ತಂಗಡಿಯ ಎಲ್ಲಾ ವೆಲ್ಡಿಂಗ್ ಅಂಗಡಿಗೆ ಹೋಗಿ ವಿಚಾರಿಸಿದಾಗ ಒಂದು ಶಾಪ್ ನಲ್ಲಿ ಒಂದು ಏಣಿ ತಯಾರಿಸಿರುವುದು ತಿಳಿದು ಬಂತು ಇದರ ಬಗ್ಗೆ ವಿಚಾರಿಸಿದಾಗ ತಯಾರಿಸಲು ನೀಡಿದ ವ್ಯಕ್ತಿಯ ಮೊಬೈಲ್ ಸಂಖ್ಯೆ ನೀಡಿದ್ದರು. ಇದನ್ನು ಪರಿಶೀಲನೆ ಮಾಡಿ ತನಿಖೆ ನಡೆಸಿದಾಗ ಕಳ್ಳ ಸಿಕ್ಕಿ ಬಿದ್ದಿದ್ದಾನೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka