10:33 PM Wednesday 12 - March 2025

ಸೀಮಂತ ಕಾರ್ಯಕ್ರಮ ವೇಳೆ ಅಡುಗೆ ಸಿಲಿಂಡರ್​ ಸ್ಫೋಟ: ನಾಲ್ವರ ಸಾವು, 19 ಮಂದಿ ಗಂಭೀರ

gas-cylinder-blast
26/02/2022

ದೋರನಹಳ್ಳಿ: ಸೀಮಂತ ಕಾರ್ಯಕ್ರಮದಲ್ಲಿ ಅಡುಗೆ ಸಿಲಿಂಡರ್​ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದೆ. 19 ಜನರ ಸ್ಥಿತಿ ಗಂಭೀರವಾಗಿರುವ ಘಟನೆ ಶಹಾಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಹಾಂತೇಶ (15 ತಿಂಗಳು, ಆದ್ಯಾ (3) ಹಾಗೂ ನಿಂಗಮ್ಮ (85), ಗಂಗಮ್ಮ(51) ಮೃತಪಟ್ಟಿವರಾಗಿದ್ದಾರೆ. ಕೃಷ್ಣಾ ಭಾಗ್ಯ ಜಲನಿಗಮದ (ಕೆಬಿಜೆಎನ್​ಎಲ್​) ನಿವೃತ್ತ ನೌಕರನ ಮನೆಯಲ್ಲಿ ಶುಕ್ರವಾರ ಬೆಳಗ್ಗೆ ಸೀಮಂತ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಮನೆ ಹೊರಗಡೆ ಅಡುಗೆಗೆ ಸಿದ್ಧತೆ ವೇಳೆ ಸಿಲಿಂಡರ್​ ಸ್ಫೋಟಗೊಂಡಿದ್ದು, ಸ್ಥಳದಲ್ಲಿದ್ದ 23ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯವಾಗಿದೆ. ಗಾಯಾಳುಗಳನ್ನು ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಶಹಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಕಲುಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಾಂತೇಶ, ಆದ್ಯಾ ಹಾಗೂ ನಿಂಗಮ್ಮ ಶುಕ್ರವಾರ ಮೃತಪಟ್ಟಿದ್ದಾರೆ. ಶನಿವಾರ ಗಂಗಮ್ಮ(51) ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಶಹಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಉಕ್ರೇನ್ ನಲ್ಲಿ ಅನ್ನ ನೀರಿಗಾಗಿ ಪರದಾಡುತ್ತಿರುವ ಭಾರತೀಯರು!

ನನಗೆ ಮದ್ದುಗುಂಡು ನೀಡಿ, ಪ್ರಯಾಣ ವ್ಯವಸ್ಥೆ ಬೇಡ | ಅಮೆರಿಕಕ್ಕೆ ಉಕ್ರೇನ್ ಅಧ್ಯಕ್ಷ ತಿರುಗೇಟು

ಮಚ್ಚಿನಿಂದ ಹೊಡೆದು ಪತಿಯಿಂದ ಪತ್ನಿಯ ಕೊಲೆ

ದಲಿತ ಯುವಕನ ಕೊಲೆ ಪ್ರಕರಣ: ಆರೋಪಿ ಪೊಲೀಸ್‌ ವಶಕ್ಕೆ

ರಷ್ಯಾದ ಸಾರಿಗೆ ವಿಮಾನ ಹೊಡೆದುರುಳಿಸಿದ ಉಕ್ರೇನ್ : ಅಧಿಕಾರಿಗಳ ಮಾಹಿತಿ

 

ಇತ್ತೀಚಿನ ಸುದ್ದಿ

Exit mobile version