ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ನಂಬಿಸಿ ಅತ್ಯಾಚಾರ :ನಟನ ವಿರುದ್ಧ ಕೇಸ್  - Mahanayaka

ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ನಂಬಿಸಿ ಅತ್ಯಾಚಾರ :ನಟನ ವಿರುದ್ಧ ಕೇಸ್ 

vejaya babu
27/04/2022

ಕೊಚ್ಚಿ: ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ನಟ ಮತ್ತು ನಿರ್ಮಾಪಕನ ಮೇಲೆ ದೂರು ದಾಖಲಿಸಿದ ಘಟನೆ ನಡೆದಿದೆ.

ಮಲಯಾಳಂನ ಖ್ಯಾತ ನಟ ಮತ್ತುನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ  ವಿಜಯ್ ಬಾಬು ವಿರುದ್ಧದ ಅತ್ಯಾಚಾರ ಪ್ರಕರಣವು ಮಲಯಾಳಂ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ.  ವಿಜಯ್ ಬಾಬು ವಿರುದ್ಧ ಎರ್ನಾಕುಲಂ ಸೌತ್ ಪೊಲೀಸರು ಅತ್ಯಾಚಾರ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಎರ್ನಾಕುಲಂನಲ್ಲಿರುವ ತಮ್ಮ ಫ್ಲಾಟ್‌ ನಲ್ಲಿ ಸಿನಿಮಾದಲ್ಲಿ ಹೆಚ್ಚಿನ ಅವಕಾಶ ನೀಡುವುದಾಗಿ ಹೇಳಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬುದು ವಿಜಯ್ ಬಾಬು ವಿರುದ್ಧದ ಸಂತ್ರಸ್ತೆ ದೂರು ನೀಡಿದ್ದು.  ಈ ತಿಂಗಳ 22 ರಂದು ವಿಜಯ್ ಬಾಬು ವಿರುದ್ಧ ಮಹಿಳೆ ಪೊಲೀಸ್ ಠಾಣೆ ಮೇಟ್ಟಿಲೆರಿದ್ದಾರೆ.

ವಿಜಯ್ ಬಾಬು ವಿರುದ್ಧ ಅತ್ಯಾಚಾರ ಮತ್ತು ದೈಹಿಕ ಹಾನಿ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.  ಪ್ರಕರಣಕ್ಕೆ ಸಂಬಂಧ ಪಟ್ಟ ವಿವರಗಳನ್ನು ಪೊಲೀಸರು ಇನ್ನೂ ಬಿಡುಗಡೆ ಮಾಡಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಡು ರಸ್ತೆಯಲ್ಲಿ ಕೈಕೊಟ್ಟ ಇಲೆಕ್ಟ್ರಿಕ್ ಬೈಕ್ ಗೆ ಬೆಂಕಿ ಇಟ್ಟ!

ರಥಕ್ಕೆ ವಿದ್ಯುತ್ ತಂತಿ ತಗುಲಿ;  11  ಮಂದಿ ಸಾವು

ನರ್ಸ್ ನ ಕೈಯಿಂದ ಜಾರಿ ಬಿದ್ದು ನವಜಾತ ಶಿಶು ಸಾವು!: ತಾಯಿಯ ಕಣ್ಣಮುಂದೆಯೇ ಘಟನೆ

ಇಫ್ತಾರ್ ಕೂಟದಲ್ಲಿ ಟೋಪಿ ಧರಿಸಲು ಹಿಂದೇಟು ಹಾಕಿದ ಪ್ರಜ್ವಲ್ ರೇವಣ್ಣ!

ತಕರಾರು ಯಾಕೆ ನೀವೇ ಸಿಎಂ ಆಗಿ ಬಿಡಿ ಎಂದ ಯತ್ನಾಳ್: ನಕ್ಕ ಬಸವರಾಜ್ ಬೊಮ್ಮಾಯಿ

 

ಇತ್ತೀಚಿನ ಸುದ್ದಿ