ಸಿನಿ ಪ್ರಿಯರಿಗೆ ಸಿಹಿ ಸುದ್ದಿ: ಶೇ.100 ಸೀಟು ಭರ್ತಿಗೆ ಅವಕಾಶ - Mahanayaka

ಸಿನಿ ಪ್ರಿಯರಿಗೆ ಸಿಹಿ ಸುದ್ದಿ: ಶೇ.100 ಸೀಟು ಭರ್ತಿಗೆ ಅವಕಾಶ

03/02/2021

ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟ್ ಭರ್ತಿಗೆ ಅವಕಾಶ ನೀಡಲು ವ್ಯಾಪಕ ಒತ್ತಡಗಳು ಕೇಳಿ ಬಂದ ಹಿನ್ನೆಲೆಯಲ್ಲಿ  ಇದೀಗ ರಾಜ್ಯ ಸರ್ಕಾರವು ಷರತ್ತು ಬದ್ಧವಾಗಿ, ಶೇ.100 ಸೀಟು ಭರ್ತಿಗೆ ಅವಕಾಶ ನೀಡಿದೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ ಸಚಿವ ಡಾ.ಕೆ.ಸುಧಾಕರ್, ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗುವುದು. ಆದರೆ,  ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಮತ್ತೆ ಶೇ.50ರಷ್ಟು ಸೀಟ್ ಭರ್ತಿಗೆ ಮಾತ್ರವೇ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಸಿಎಂ ಸಲಹೆ ಹಾಗೂ ಚಿತ್ರರಂಗದ ಗಣ್ಯರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಸುಧಾಕರ್ ಭಾಗವಹಿಸಿದರು ಎಂದು ಹೇಳಲಾಗಿದೆ.  ಕೊವಿಡ್ ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಸಿನಿಮಾ ಥಿಯೇಟರ್ ಹೌಸ್ ಫುಲ್ ನಿಂದಾಗಿ ಸಮಸ್ಯೆಯಾದರೆ ಹಳೆಯ ನಿಯಮವನ್ನೇ ಜಾರಿಗೆ ತರಲಾಗುವುದು ಎಂದು ಅವರು ಸುಧಾಕರ್ ಹೇಳಿದರು.

ಇತ್ತೀಚಿನ ಸುದ್ದಿ