ಸೆಕ್ಸ್ ಸಿಡಿ, ಸಿನಿಮಾ ಸ್ಟಂಟ್ ನಂತೆ ಗ್ರಾಫಿಕ್ಸ್ ಇರಬಹುದು | ಸಚಿವ ನಾರಾಯಣ ಗೌಡ
06/03/2021
ಮಂಡ್ಯ: ಮಾಜಿ ಸಚಿವರೊಬ್ಬರ ಅಶ್ಲೀಲ ವಿಡಿಯೋ ಬಿಡುಗಡೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ನಾರಾಯಣ ಗೌಡ ಪ್ರತಿಕ್ರಿಯಿಸಿದ್ದು, ಆ ವಿಡಿಯೋ ಗ್ರಾಫಿಕ್ಸ್ ಆಗಿರಬಹುದು ಎಂದು ಹೇಳಿದ್ದಾರೆ.
ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ ಬಾಂಬೆಗೆ ತೆರಳಿದ್ದ ಮಿತ್ರಮಂಡಳಿ ಇದೀಗ ಸಿಡಿಗೆ ಹೆದರಿ ಓಡುವಂತಾಗಿದೆ. ಬಾಂಬೆ ಮಿತ್ರಮಂಡಳಿ ಇದೀಗ ಇದಕ್ಕೂ ಮೊದಲು ಬಿಡುಗಡೆಯಾಗಿರುವ ರಮೇಶ್ ಜಾರಕಿಹೊಳಿ ಅವರ ವಿಡಿಯೋ ಸುಳ್ಳು ಎಂದು ನೇರವಾಗಿ ಹೇಳಿಕೆ ನೀಡುತ್ತಿದ್ದಾರೆ.
ಸಿನಿಮಾದಲ್ಲಿ ದೊಡ್ಡ ಬೆಟ್ಟದಿಂದ ಕೆಳಗೆ ಬೀಳುತ್ತಾರೆ, ಅದು ನೈಜವಾಗಿ ಇರೋದಿಲ್ಲ, ಬದಲಿಗೆ ಅದೊಂದು ಸ್ಟಂಟ್ ಆಗಿರುತ್ತದೆ ಎಂದು ಹೇಳಿದರು. ಇದೊಂದು ಸಿನಿಮಾ ಸ್ಟಂಟ್ ಗಳನ್ನು ಗಳಂತೆ ಇದು ಕೂಡ ಗ್ರಾಫಿಕ್ಸ್ ಇರಬಹುದು ಎಂದು ಅವರು ಹೇಳಿದರು.