ಕಾಲ್ ಗರ್ಲ್ ಬೇಕಾದ್ರೆ ಸಂಪರ್ಕಿಸಿ ಎಂದು ಪತ್ನಿಯ ಫೋಟೋ, ನಂಬರ್ ಹಾಕಿದ ಪಾಪಿ!

sathyanarayana
11/04/2024

ಬೆಂಗಳೂರು:  ಪತ್ನಿ ಡಿವೋರ್ಸ್ ಗೆ ಅರ್ಜಿ ಹಾಕಿದ್ದಾಳೆ ಎನ್ನುವ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಪತ್ನಿಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಕಾಲ್ ಗರ್ಲ್ ಎಂದು ಬರೆದುಕೊಂಡು ಆಕೆಯ ನಂಬರ್ ನೀಡಿರುವ ವಿಕೃತ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕರಿ ಸತ್ಯನಾರಾಯಣ ರೆಡ್ಡಿ ಎಂಬಾತ ಈ ಕೃತ್ಯ ಎಸಗಿದ್ದು, ಕೃತ್ಯದ ಬಳಿಕ ಆರೋಪಿ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದಾನೆ.

ಆರೋಪಿಯು ಕಲಾಶಶಿ ಎಂಬ  ಫೇಸ್ ಬುಕ್ ಪೇಜ್ ಕ್ರಿಯೇಟ್ ಮಾಡಿ, ತನ್ನ ಪತ್ನಿಯ ಫೋಟೋ ಹಾಗೂ ಫೋನ್ ನಂಬರ್ ಮತ್ತು ಆಕೆಯ ಸಹೋದರನ ಫೋನ್ ನಂಬರ್ ಹಾಕಿ, ಕಾಲ್ ಗರ್ಲ್ ಬೇಕಿದ್ದರೆ ಕರೆ ಮಾಡಿ ಎಂದು ಪೋಸ್ಟ್ ಶೇರ್ ಮಾಡಿದ್ದ. ಇದರಿಂದಾಗಿ ಪತ್ನಿಗೆ  ಹಾಗೂ ಪತ್ನಿಯ ಸಹೋದರನಿಗೆ ನಿರಂತರವಾಗಿ ಕರೆಗಳು ಬರಲು ಆರಂಭಿಸಿತ್ತು.

2019ರಲ್ಲಿ ಸತ್ಯನಾರಾಯಣ ಜೊತೆಗೆ ಶಶಿಕಲಾ ವಿವಾಹವಾಗಿದ್ದರು. ಆದರೆ 1 ವರ್ಷದಿಂದ ಆತ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಲು ಆರಂಭಿಸಿದ್ದ. ಈತನ ವರ್ತನೆಯಿಂದ ಬೇಸತ್ತು ಶಶಿಕಲಾ ಅವರು ಡಿವೋರ್ಸ್ ಗೆ ಅರ್ಜಿ ಹಾಕಿದ್ದರು.

ಇದೀಗ ಡಿವೋರ್ಸ್ ಗೆ ಅರ್ಜಿ ಹಾಕಿದರೂ ಈತ ಮತ್ತೆ ತನ್ನ ಕೃತ್ಯ ಮುಂದುವರಿಸಿದ್ದು, ಪತ್ನಿಯ ತೇಜೋವಧೆಗೆ ಮುಂದಾಗಿದ್ದಾನೆ.  ಘಟನೆಗೆ ಸಂಬಂಧಿಸಿದಂತೆ ನಂದಿನಿ ಲೇಔಟ್  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version