ದೇಗುಲವನ್ನು ಕಾಪಾಡಿದ ಸೈರನ್: ಸೈರನ್ ಮೊಳಗುತ್ತಿದ್ದಂತೆಯೇ ಕಳ್ಳರು ಎಸ್ಕೇಪ್

30/09/2023
ಚಾಮರಾಜನಗರ: ದೇವಾಲಯಕ್ಕೆ ಕನ್ನ ಹಾಕಲು ವಿಫಲ ಯತ್ನ ನಡೆಸಿರುವ ಘಟನೆ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಸಿದ್ದರಾಮೇಶ್ವರ ದೇವಾಲಯದಲ್ಲಿ ಕಳೆದ ರಾತ್ರಿ ನಡೆದಿದೆ.
ಟವೆಲ್ ನ್ನು ಮುಖಕ್ಕೆ ಕಟ್ಟಿಕೊಂಡು ಒಳ ಬಂದಿರುವ ಕಳ್ಳರು ಹಾರೆಯ ಸಹಾಯದಿಂದ ದೇವಾಲಯದ ಒಳಬಾಗಿಲನ್ನು ಮೀಟಿದ ವೇಳೆ ಸೈರನ್ ಮೊಳಗಿದೆ. ಇದರಿಂದ, ಬೆಚ್ಚಿ ಬಿದ್ದ ಇಬ್ಬರು ಕಳ್ಳರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಬರಿಗೈಯಲ್ಲಿ ಕಾಲ್ಕಿತ್ತಿದ್ದಾರೆ.
ಹುಂಡಿ ಕದಿಯಲು ಬಂದಿದ್ದ ಇಬ್ಬರ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮೂರನೇ ಬಾಗಿಲಿನ ಬೀಗಕ್ಕೆ ಹಾರೆಯಿಂದ ಮೀಟಿದಾಗ ಸೈರನ್ ಆನ್ ಆದ್ದರಿಂದ ಹುಂಡಿ ಕಳವು ವಿಫಲವಾಗಿದೆ.
ಅಧಿಕ ಆದಾಯ ಬರುವ ದೇವಾಲಯಗಳಲ್ಲಿ ಸಿದ್ದರಾಮೇಶ್ವರ ದೇವಾಲಯವೂ ಒಂದಾಗಿರುವುದರಿಂದ ಕಳ್ಳರು ಕಣ್ಣಿಟ್ಟಿದ್ದರು. ಸದ್ಯ, ಸ್ಥಳಕ್ಕೆ ಚಾಮರಾಜನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.