ಪುಲ್ವಾಮಾ ದಾಳಿಗೆ ಆರು ವರ್ಷ: 300 ಕಿಲೋ ಗ್ರಾಂ ಆರ್‌ಡಿಎಕ್ಸ್ ಎಲ್ಲಿಂದ ಬಂದಿದೆ ಎಂದು ಪ್ರಶ್ನಿಸಿದ ಕಾಂಗ್ರೆಸ್ ಮುಖಂಡ

ಭಾರತೀಯ ಸೇನೆಯ ವಿರುದ್ಧ ಅತಿ ಭಯಾನಕ ಧಾಳಿಗಳಲ್ಲಿ ಒಂದಾದ ಪುಲ್ವಾಮಾ ಆಕ್ರಮಣಕ್ಕೆ ಆರು ವರ್ಷಗಳು ತುಂಬಿರುವಂತೆಯೇ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಉದಯ್ ಬಾನು ಚಿಬ್ ಅವರು ಕೆಲವು ಖಾರ ಪ್ರಶ್ನೆಗಳನ್ನ ಕೇಳಿದ್ದಾರೆ.
ಆ 300 ಕಿಲೋ ಗ್ರಾಂ ಆರ್‌ಡಿಎಕ್ಸ್ ಎಲ್ಲಿಂದ ಬಂದಿದೆ? ಆಕ್ರಮಣದ ಬಳಿಕ ಜಮ್ಮು-ಕಾಶ್ಮೀರದ ರಾಜ್ಯಪಾಲರಿಗೆ ನರೇಂದ್ರ ಮೋದಿಯವರು ಬೆದರಿಕೆ ಹಾಕಿ ಮೌನಗೊಳಿಸಿದ್ದು ಏಕೆ? ಈ ಘಟನೆಯಲ್ಲಿ ಮೃತಪಟ್ಟ ಸಿಆರ್ಪಿಎಫ್ ಯೋಧರ ಕುಟುಂಬಗಳಿಗೂ ಈ ದೇಶಕ್ಕೂ ಈ ಕುರಿತಂತೆ ತಿಳಿದುಕೊಳ್ಳುವ ಹಕ್ಕು ಇದೆ. ಇದಕ್ಕೆ ಕಾರಣರು ಯಾರು ಎಂದವರು ಪ್ರಶ್ನಿಸಿದ್ದಾರೆ.
2019 ಫೆಬ್ರವರಿ 14ರಂದು ಜಮ್ಮು ಶ್ರೀನಗರ ರಾಷ್ಟ್ರೀಯ ರಸ್ತೆಯ ಪುಲ್ವಾಮದಲ್ಲಿ ಭಯೋತ್ಪಾದಕರು ಸ್ಪೋಟಕ ವಸ್ತು ತುಂಬಿದ ಕಾರನ್ನು ಸಿಆರ್ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆಯುವ ಮೂಲಕ 40ರಷ್ಟು ಯೋಧರನ್ನು ಸಾಯಿಸಿದ್ದರು. ದಿನಗಳ ಬಳಿಕ ಭಾರತದ ವೈಮಾನಿಕ ದಳವು ಪಾಕಿಸ್ತಾನದ ಬಾಲಕೋಟ್ ಮೇಲೆ ದಾಳಿ ನಡೆಸಿದ್ದೂ ನಡೆಯಿತು.
ಆತ್ಮಹತ್ಯಾ ದಾಳಿ ಮತ್ತು ಆ ಬಳಿಕದ ಬೆಳವಣಿಗೆಯ ಬಗ್ಗೆ ಈ ದೇಶದಲ್ಲಿ ಹಲವು ಚರ್ಚೆಗಳು ನಡೆದಿವೆ. ಅನೇಕರು ಹಲವು ಪ್ರಶ್ನೆಗಳನ್ನ ಎತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಆಗ ರಾಜ್ಯಪಾಲರಾಗಿದ್ದ ಮಲಿಕ್ ಅವರೇ ಈ ಕುರಿತಂತೆ ಕೆಲವು ಅನುಮಾನಗಳನ್ನ ವ್ಯಕ್ತಪಡಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj