ಡಿಸೆಂಬರ್ 31ರಂದು ಬಿವಿಎಸ್ ವತಿಯಿಂದ ಕೌಶಲ್ಯಾಧರಿತ ತರಬೇತಿ ಶಿಬಿರ
![bvs](https://www.mahanayaka.in/wp-content/uploads/2023/12/bvs.jpg)
29/12/2023
ದಕ್ಷಿಣ ಕನ್ನಡ: ಭಾರತೀಯ ವಿದ್ಯಾರ್ಥಿ ಸಂಘ—BVS ವತಿಯಿಂದ ಡಿಸೆಂಬರ್ 31ರಂದು ಕೌಶಲ್ಯಾಧರಿತ ತರಬೇತಿ ಶಿಬಿರವನ್ನು ಸಹಕಾರ ಸಂಘ ನಿ. ಬಂಟ್ವಾಳ, ಕೇಂದ್ರ ಕಚೇರಿ ಮೆಲ್ಕಾರ್ — ಮುಡಿಪು ರಸ್ತೆ ಇಲ್ಲಿ ಆಯೋಜಿಸಲಾಗಿದೆ.
ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳ ಆತಿಥ್ಯದಲ್ಲಿ ಈ ಶಿಬಿರ ನಡೆಯಲಿದ್ದು, ವಿದ್ಯಾರ್ಥಿಗಳ ಸುಸ್ಥಿರ ಜೀವನ, ಕಲಿಕಾ ಕೌಶಲ್ಯ, ಸ್ಪರ್ಧಾತ್ಮಕ ಪರೀಕ್ಷೆಗಳ ಎದುರಿಸುವಿಕೆ, ಶೈಕ್ಷಣಿಕ ಏಕೀಕರಣ, ಉದ್ಯಮಗಳ ಸೃಷ್ಠಿ, ಒಳಗೊಳ್ಳುವಿಕೆ. ಈ ಮೊದಲಾದ ವಿಷಯಗಳಲ್ಲಿ ತರಬೇತಿ ನೀಡಲಾಗುವುದು.
ಯುವ ಜನರು ಬದುಕಿನ ಅತ್ಯಮೂಲ್ಯ ಸಮಯವನ್ನು ಈ ತರಬೇತಿಗೆ ವಿನಿಯೋಗಿಸಿ, ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ಬಿವಿಎಸ್ ಸಂಘಟಕರು ಮನವಿ ಮಾಡಿಕೊಂಡಿದ್ದಾರೆ.