10 ರೂಪಾಯಿಗೆ ಚಿನ್ನ: ಜಿಯೋ ಫೈನಾನ್ಸ್ ನಿಂದ ಸ್ಮಾರ್ಟ್‌ ಗೋಲ್ಡ್ ಯೋಜನೆ - Mahanayaka
7:05 PM Wednesday 30 - October 2024

10 ರೂಪಾಯಿಗೆ ಚಿನ್ನ: ಜಿಯೋ ಫೈನಾನ್ಸ್ ನಿಂದ ಸ್ಮಾರ್ಟ್‌ ಗೋಲ್ಡ್ ಯೋಜನೆ

jio
30/10/2024

ನವದೆಹಲಿ: ದೀಪಾವಳಿಯ ಮೊದಲು, ಧನ್ ತೇರಸ್ ಸಂದರ್ಭದಲ್ಲಿ ಜಿಯೋ ಫೈನಾನ್ಸ್ ಸರ್ವೀಸಸ್ ಲಿಮಿಟೆಡ್ ಸ್ಮಾರ್ಟ್ ಗೋಲ್ಡ್ ಯೋಜನೆಯನ್ನು ಪ್ರಾರಂಭಿಸಿದೆ.

ಸ್ಮಾರ್ಟ್‌ಗೋಲ್ಡ್ ಯೋಜನೆ ಅಡಿಯಲ್ಲಿ ಚಿನ್ನವನ್ನು ಡಿಜಿಟಲ್ ಸ್ವರೂಪದಲ್ಲಿ ಖರೀದಿಸುವ ಮೂಲಕ ಚಿನ್ನದ ಮೇಲೆ ಹೂಡಿಕೆಯನ್ನು ಮಾಡಬಹುದು. ಚಿನ್ನದ ಹೂಡಿಕೆಯಿಂದ ಪಡೆದ ಸ್ಮಾರ್ಟ್‌ಗೋಲ್ಡ್ ಯೂನಿಟ್ ಗಳನ್ನು ಯಾವುದೇ ಸಮಯದಲ್ಲಿ ನಗದು, ಚಿನ್ನದ ನಾಣ್ಯಗಳು ಅಥವಾ ಆಭರಣಗಳಾಗಿ ಪರಿವರ್ತಿಸಬಹುದು. ಇನ್ನೂ ಕುತೂಹಲಕಾರಿ ಸಂಗತಿ ಏನೆಂದರೆ, ಸ್ಮಾರ್ಟ್ ಗೋಲ್ಡ್ ನಲ್ಲಿ (SmartGold) ಸಾವಿರಾರು ಅಥವಾ ಲಕ್ಷ ರೂಪಾಯಿಗಳಷ್ಟು ಹೂಡಿಕೆ ಮಾಡುವ ಅಗತ್ಯವಿಲ್ಲ, ಕೇವಲ 10 ರೂಪಾಯಿಗೂ ಚಿನ್ನವನ್ನು ಖರೀದಿಸಬಹುದು.

ಜಿಯೋ ಫೈನಾನ್ಸ್ ಅಪ್ಲಿಕೇಷನ್‌ನಲ್ಲಿ ಸ್ಮಾರ್ಟ್‌ಗೋಲ್ಡ್ ಯೋಜನೆಯಡಿ ಚಿನ್ನದಲ್ಲಿ ಹೂಡಿಕೆ ಮಾಡುವುದಕ್ಕೆ ಎರಡು ಆಯ್ಕೆಗಳು ಗ್ರಾಹಕರಿಗೆ ಲಭ್ಯವಿವೆ. ಮೊದಲನೆಯದಾಗಿ ಹೂಡಿಕೆಯ ಒಟ್ಟು ಮೊತ್ತವನ್ನು ನಿರ್ಧರಿಸಬಹುದು, ಎರಡನೆಯದಾಗಿ ಚಿನ್ನದ ತೂಕದ ಆಧಾರದಲ್ಲಿ, ಅಂದರೆ ಗ್ರಾಂ ಲೆಕ್ಕದಲ್ಲಿ ಹೂಡಿಕೆ ಮಾಡಬಹುದು. ಭೌತಿಕ ಚಿನ್ನದ ವಿತರಣೆಯು 0.5 ಗ್ರಾಂ ಮತ್ತು ಅದಕ್ಕಿಂತ ಹೆಚ್ಚು ಇರಬೇಕಾಗುತ್ತದೆ. ಇದು 0.5 ಗ್ರಾಂ, 1 ಗ್ರಾಂ, 2 ಗ್ರಾಂ, 5 ಗ್ರಾಂ ಮತ್ತು 10 ಗ್ರಾಂಗಳಲ್ಲಿ ಲಭ್ಯವಿರುತ್ತದೆ. ಗ್ರಾಹಕರು ಬಯಸಿದರೆ, ಅವರು ನೇರವಾಗಿ ಅಪ್ಲಿಕೇಷನ್‌ನಲ್ಲಿ ಚಿನ್ನದ ನಾಣ್ಯಗಳನ್ನು ಖರೀದಿಸುವ ಮೂಲಕ ಹೋಮ್ ಡೆಲಿವರಿ ಸೌಲಭ್ಯವನ್ನು ಸಹ ಪಡೆಯಬಹುದು.

ಗ್ರಾಹಕರ ಚಿನ್ನವನ್ನು ಸುರಕ್ಷಿತವಾಗಿಡುವುದಕ್ಕಾಗಿ ಹೂಡಿಕೆಯ ನಂತರ, ಸ್ಮಾರ್ಟ್ ಗೋಲ್ಡ್ ಹೂಡಿಕೆಗೆ ಸಮನಾದ 24 ಕ್ಯಾರೆಟ್ ಚಿನ್ನವನ್ನು ಖರೀದಿಸುತ್ತದೆ ಮತ್ತು ಅದನ್ನು ವಿಮೆ ಮಾಡಿದ ವಾಲ್ಟ್‌ನಲ್ಲಿ ಇರಿಸುತ್ತದೆ. ಇದು ಚಿನ್ನವನ್ನು ಜೋಪಾನ ಮಾಡಬೇಕು ಎಂಬ ನಿಮ್ಮ ಜವಾಬ್ದಾರಿಯಿಂದ ಮುಕ್ತಗೊಳಿಸುವುದಲ್ಲದೆ, ಚಿನ್ನವು ಕಳ್ಳತನ ಆಗುತ್ತದೆ ಎಂಬ ಬಗ್ಗೆಯೂ ಚಿಂತಿಸಬೇಕಾಗಿಲ್ಲ. ಜಿಯೋ ಫೈನಾನ್ಸ್ ಅಪ್ಲಿಕೇಷನ್‌ನಲ್ಲಿ ನೀವು ಬಯಸಿದಾಗ ಚಿನ್ನದ ನೇರ ಮಾರುಕಟ್ಟೆ ಬೆಲೆಗಳನ್ನು ನೋಡಬಹುದು. ಸ್ಮಾರ್ಟ್ ಗೋಲ್ಡ್ ಡಿಜಿಟಲ್ ಚಿನ್ನವನ್ನು ಖರೀದಿಸಲು ಅನುಕೂಲಕರ, ಸುರಕ್ಷಿತ ಮತ್ತು ಅರ್ಥಪೂರ್ಣ ಮಾರ್ಗವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ