ಅಮಾನವೀಯ ಘಟನೆ: ಸ್ಮಶಾನ ಅಗೆದು ವಿಕಲಚೇತನ ಬಾಲಕಿಯ ಮೃತದೇಹದ ಮೇಲೆ ಅತ್ಯಾಚಾರ
ಇಸ್ಲಾಮಾಬಾದ್: ಸಮಾಧಿ ಅಗೆದು ಅಪ್ರಾಪ್ತ ವಿಕಲಚೇತನ ಬಾಲಕಿಯ ಮೃತದೇಹದ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ವಿಲಕ್ಷಣ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಮೇ 5ರಂದು ಈ ಘಟನೆ ನಡೆದಿದ್ದು, ಪಾಕಿಸ್ತಾನದ ಗುಜರಾತ್ ನಲ್ಲಿ ಈ ಅಮಾನವೀಯ, ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ ನಡೆದಿದೆ. ವರದಿಗಳ ಪ್ರಕಾರ ಸುಮಾರು 17ಕ್ಕೂ ಅಧಿಕ ಮಂದಿ ಈ ಕೃತ್ಯ ನಡೆಸಿದ್ದಾರೆನ್ನಲಾಗುತ್ತಿದೆ.
ಹಿಂದಿನ ದಿನ ಬಾಲಕಿಯನ್ನು ಸ್ಮಶಾನದಲ್ಲಿ ಹೂತು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಕುಟುಂಬಸ್ಥರು ತೆರಳಿದ್ದರು. ಆದರೆ ಮರುದಿನ ಬೆಳಗ್ಗೆ ಮತ್ತೆ ಸಮಾಧಿ ಬಳಿಕ ಕುಟುಂಬಸ್ಥರು ಆಗಮಿಸಿದಾಗ ಸಮಾಧಿ ಅಗೆದ ಸ್ಥಿತಿಯಲ್ಲಿದ್ದು, ಮೃತದೇಹದಲ್ಲಿ ಯಾವುದೇ ಬಟ್ಟೆಗಳಿರಲಿಲ್ಲ. ಮಾತ್ರವಲ್ಲದೇ ಮೃತದೇಹದ ಮೇಲೆ ಅತ್ಯಾಚಾರ ನಡೆಸಿರುವ ಕುರುಹುಗಳ ಕಂಡು ಬಂದಿತ್ತು. ಇದರಿಂದ ಆಘಾತಕ್ಕೀಡಾದ ಕುಟುಂಬಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ವೈಜ್ಞಾನಿಕ ವಿಧಾನಗಳ ಮೂಲಕ ತನಿಖೆ ನಡೆಸುತ್ತಿದ್ದಾರೆ. ಕೃತ್ಯದಲ್ಲಿ ಎಷ್ಟು ಜನರು ಭಾಗಿಯಾಗಿದ್ದಾರೆ ಎನ್ನುವುದರ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಾನನಷ್ಟ ಮೊಕದ್ದಮೆ ಹಾಕಲು ಡಿ.ಕೆ.ಶಿವಕುಮಾರ್ ಗೆ ಮಾನ ಇದೆಯೇ? | ಯತ್ನಾಳ್ ಪ್ರಶ್ನೆ
ಮದುವೆಯ ಸುದ್ದಿ ಹರಡಿದವರಿಗೆ ಕಾಲಿನ ಫೋಟೋ ಹಾಕಿ ತಿರುಗೇಟು ನೀಡಿದ ಸಾಯಿ ಪಲ್ಲವಿ
ಸಿದ್ದರಾಮಯ್ಯ ಡ್ರಗ್ಸ್ ಹಣದಲ್ಲಿ ಸರ್ಕಾರ ನಡೆಸಿದರು: ನಳಿನ್ ಕುಮಾರ್ ಕಟೀಲ್ ವಾಗ್ದಾಳಿ
ಕಡಬ ಚರ್ಚ್ ದಾಳಿ: ದೂರು ನೀಡಿದವರ ವಿರುದ್ಧವೇ ಸುಳ್ಳು ದೂರು | ಎಸ್ ಡಿಪಿಐ ಆಕ್ರೋಶ