ಸ್ಮಶಾನದ ಮುಂದೆ ಹೌಸ್ ಫುಲ್ ಬೋರ್ಡ್ | ರಾಜ್ಯ-ದೇಶ ಎಂದೂ ಕಾಣದ ದೃಶ್ಯ
ಬೆಂಗಳೂರು: ಚಿತ್ರ ಮಂದಿರಗಳ ಎದುರು ಹೌಸ್ ಫುಲ್ ಬೋರ್ಡ್ ಇಲ್ಲಿಯವರೆಗೆ ಜನರು ನೋಡಿದ್ದರು. ಆದರೆ ಇದೀಗ ಸ್ಮಶಾನದ ಮುಂದೆ ಹೌಸ್ ಫುಲ್ ಬೋರ್ಡ್ ಬಿದ್ದಿದ್ದು, ರಾಜ್ಯ, ದೇಶ ಹಿಂದೆಂದೂ ಕಾಣದ ಸ್ಥಿತಿ ಇದಾಗಿದೆ.
ಕೊರೊನಾ ತುರ್ತು ಆರೋಗ್ಯ ಪರಿಸ್ಥಿತಿಯಿಂದಾಗಿ ಆಸ್ಪತ್ರೆ ಬೆಡ್ ಗೂ ಕಾಯಬೇಕು, ಇತ್ತ ಮರಣವಾದರೆ, ಸ್ಮಶಾನದಲ್ಲಿಯೂ ಕಾಯಬೇಕು. ಇದು ರಾಜ್ಯ-ದೇಶದ ದುಸ್ಥಿತಿ. ಇದೀಗ ಚಾಮರಾಜಪೇಟೆಯ ಟಿಆರ್ ಮಿಲ್ ಸಮೀಪದ ಸ್ಮಶಾನದಲ್ಲಿ ಮೃತದೇಹಗಳು ಭರ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಮೃತದೇಹಗಳಿಗೆ ಸ್ಥಳಾವಕಾಶವಿಲ್ಲದ ಕಾರಣ ಸ್ಮಶಾನದ ಗೇಟ್ ನಲ್ಲಿ ಹೌಸ್ ಫುಲ್ ಬೋರ್ಡ್ ಹಾಕಲಾಗಿದೆ.
ಭಾನುವಾರ ಇದೇ ಸ್ಮಶಾನದಲ್ಲಿ 45 ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗಿದೆ. ಈಗಾಗಲೇ 19 ಮೃತದೇಹಗಳ ದಹಿಸಲು ಬುಕ್ಕಿಂಗ್ ಮಾಡಲಾಗಿದೆ. ಇಲ್ಲಿ ದಿನಕ್ಕೆ 20 ಮೃತದೇಹಗಳ ಅಂತ್ಯಕ್ರಿಯೆ ಅವಕಾಶವಿದ್ದು, ಈ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗೆ ಅತ್ಯಧಿಕ ಸಂಖ್ಯೆ ಮೃತದೇಹಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಅನಿವಾರ್ಯವಾಗಿ ಹೌಸ್ ಫುಲ್ ಬೋರ್ಡ್ ಹಾಕಿದ್ದಾರೆ.