ಪ್ರತಿ ಮದುವೆ ಹಿಂಸೆ, ಪ್ರತಿ ಪುರುಷ ಅತ್ಯಾಚಾರಿ ಎನ್ನಲು ಸಾಧ್ಯವಿಲ್ಲ | ಸ್ಮೃತಿ ಇರಾನಿ - Mahanayaka
11:11 PM Thursday 14 - November 2024

ಪ್ರತಿ ಮದುವೆ ಹಿಂಸೆ, ಪ್ರತಿ ಪುರುಷ ಅತ್ಯಾಚಾರಿ ಎನ್ನಲು ಸಾಧ್ಯವಿಲ್ಲ | ಸ್ಮೃತಿ ಇರಾನಿ

smriti Irani
02/02/2022

ನವದೆಹಲಿ: ಪ್ರತಿ ಮದುವೆಯೂ ಹಿಂಸಾತ್ಮಕ ಮತ್ತು ಪ್ರತಿ ಪುರುಷನೂ ಅತ್ಯಾಚಾರಿ ಎಂದು ಖಂಡಿಸುವುದು ಸೂಕ್ತವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿ ಬುಧವಾರ ರಾಜ್ಯ ಸಭೆಯಲ್ಲಿ ಹೇಳಿದ್ದಾರೆ.

ವೈವಾಹಿಕ ಅತ್ಯಾಚಾರಗಳ ಬಗ್ಗೆ ಸಿಪಿಐ ನಾಯಕ ಬಿನೋತ್ ವಿಶ್ವಂ ಅವರು ಮಾತನಾಡುತ್ತಾ, ಕೌಟುಂಬಿಕ ಹಿಂಸಾಚಾರ ಕಾಯ್ದೆಯ ಸೆಕ್ಷನ್ 3 ಮತ್ತು ಅತ್ಯಾಚಾರದ ಐಪಿಸಿ ಸೆಕ್ಷನ್ 375ನ್ನು ಸರ್ಕಾರ ಗಮನಿಸಿದೆಯೇ ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗೆ ಉತ್ತರಿಸಿದ ಸ್ಮೃತಿ ಇರಾನಿ, ಪ್ರತಿ ವಿವಾಹವನ್ನು  ಹಿಂಸಾತ್ಮಕ ಎಂದು ಹೇಳಲು ಸಾಧ್ಯವಿಲ್ಲ, ದೇಶದ ಪ್ರತಿಯೊಬ್ಬ ಪುರುಷನನ್ನು ಅತ್ಯಾಚಾರಿ ಎಂದು ಖಂಡಿಸುವುದು ಸೂಕ್ತವಲ್ಲ ಎಂದರು.

ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಮಹಿಳೆಯರ ರಕ್ಷಣೆಗೆ ಸರ್ಕಾರ ಪ್ರಯತ್ನಿಸುತ್ತಿದೆ. ಇದಕ್ಕಾಗಿ 30ಕ್ಕೂ ಹೆಚ್ಚು ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿವೆ. ಈ ಸಹಾಯವಾಣಿಯಿಂದ 66 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಸಹಾಯವಾಗಿದೆ ಎಂದು ಅವರು ಹೇಳಿದರು.




ದೇಶದಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಆದ್ಯತೆಯಾಗಿದೆ. ಮದುವೆಯನ್ನು ಹಿಂಸಾತ್ಮಕ ಎನ್ನುವುದು ಸೂಕ್ತವಲ್ಲ ಎಂದು ನಾನು ಪುನರುಚ್ಚಿಸುತ್ತೇನೆ ಎಂದು ಸ್ಮೃತಿ ಇರಾನಿ ಹೇಳಿದರು. ಈ ವೇಳೆ ಮಾತನಾಡಿದ ವಿಶ್ವಂ,  ಮದುವೆ ಹಿಂಸೆ, ಪ್ರತಿ ಪುರುಷ ಅತ್ಯಾಚಾರಿ ಎನ್ನುವುದು ನನ್ನ ಹೇಳಿಕೆಯ ಅರ್ಥವಲ್ಲ ಎಂದು ಸ್ಮೃತಿ ಇರಾನಿಗೆ ಅರ್ಥೈಸಿಸಿದರು. ಬಳಿಕ ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಶ್ನೆ ಕೇಳಿದ ಅವರು,  ಈ ವಿಷಯದ ಬಗ್ಗೆ ಡೇಟಾ ಸಂಗ್ರಹ ಸಾಧ್ಯವಾದರೆ ಸಂಸತ್ತಿಗೆ ಬೇಗನೆ ಸಲ್ಲಿಸಿ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ, ಕೇಂದ್ರವು ರಾಜ್ಯ ಸರ್ಕಾರಗಳೊಂದಿಗೆ ತೊಡಗಿಸಿಕೊಳ್ಳಲು ಮತ್ತು ಅವರಿಂದ ದಾಖಲೆಗಳನ್ನು ಪಡೆಯಲು ಸದಸ್ಯರು ಸೂಚಿಸುತ್ತಿದ್ದಾರೆ. ಆದರೆ,  ರಾಜ್ಯ ಸರ್ಕಾರಗಳ ಪರವಾಗಿ ಕೇಂದ್ರ ಸರ್ಕಾರವು ಶಿಫಾರಸು ಮಾಡಲು ಸಾಧ್ಯವಿಲ್ಲ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಚಿಕನ್ ಫಾಕ್ಸ್: ಒಂದೇ ಕುಟುಂಬದ ಇಬ್ಬರು ಬಾಲಕರ ಸಾವು

ಗಾಂಜಾ ಬೆಳೆದು ಬೆಂಗಳೂರಿನಲ್ಲಿ ಮಾರಾಟ: ಇಬ್ಬರು ಆರೋಪಿಗಳ ಸೆರೆ

ಉದ್ಯಮಿಗೆ ಬ್ಯಾಂಕ್ ಕೆ ವೈ ಸಿ ಹೆಸರಿನಲ್ಲಿ 13 ಲಕ್ಷ ರೂ. ವಂಚನೆ

ಬಿಜೆಪಿ ಕಚೇರಿಯಲ್ಲೇ ಬಡಿದಾಡಿಕೊಂಡು ಕಾರ್ಯಕರ್ತರು: ಮಾಜಿ ಶಾಸಕ ಸುರೇಶ್​ ಗೌಡರ ಬೆಂಬಲಿಗನ ವಿರುದ್ಧ ದೂರು

ಕಾರು-ಟ್ರಕ್ ನಡುವೆ ಭೀಕರ ಅಪಘಾತ: ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು

ಇತ್ತೀಚಿನ ಸುದ್ದಿ