ಸ್ನಾನ ಮಾಡಲು ಬಾತ್ ರೂಮ್ ಗೆ ಹೋದಾತ ಗಂಟೆಯಾದರೂ ವಾಪಸ್ ಆಗಲಿಲ್ಲ | ಬಾಗಿಲು ತೆರೆದಾಗ ಕಾದಿತ್ತು ಶಾಕ್!
ದಕ್ಷಿಣಕನ್ನಡ: ಗ್ಯಾಸ್ ಗೀಜರ್ ಆನ್ ಮಾಡಿ ಬಿಸಿ ನೀರು ಸ್ನಾನ ಮಾಡುತ್ತಿದ್ದ ಯುವಕ ಬಾತ್ ರೂಮ್ ನಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಮಾರಿಪಳ್ಳದಲ್ಲಿ ನಡೆದಿದೆ.
23 ವರ್ಷ ವಯಸ್ಸಿನ ಇಜಾಝ್ ಅಹ್ಮದ್ ಮೃತಪಟ್ಟ ಯುವಕನಾಗಿದ್ದಾನೆ. ಸೋಮವಾರ ಸಂಜೆ ಮಾರಿಪಳ್ಳ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಇಜಾಝ್ ಗ್ಯಾಸ್ ಗೀಜರ್ ಆನ್ ಮಾಡಿ ಬಾತ್ ರೂಮ್ ನಲ್ಲಿ ಸ್ನಾನ ಮಾಡುತ್ತಿದ್ದ. ಸ್ನಾನಕ್ಕೆ ಹೋಗಿ ಒಂದು ಗಂಟೆಯಾದರೂ ಮಗ ಹೊರಬಾರದಿದ್ದಾಗ ಮನೆಯವರು ಆತನನ್ನು ಕರೆದಿದ್ದಾರೆ.
ಮನೆಯವರು ಎಷ್ಟೇ ಕರೆದರೂ ಆತನಿಂದ ಪ್ರತಿಕ್ರಿಯೆ ಬಾರದೇ ಇದ್ದಾಗ ಗಾಬರಿಯಿಂದ ಬಾಗಿಲು ಒಡೆದಿದ್ದಾರೆ. ಈ ವೇಳೆ ಇಜಾಝ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಆತನ ಪ್ರಾಣವನ್ನು ಉಳಿಸಲು ಸಾಧ್ಯವಾಗಲಿಲ್ಲ.
ಗ್ಯಾಸ್ ಗೀಜರ್‌ನಲ್ಲಿ ನೀರು ಬಿಸಿ ಮಾಡುವ ವೇಳೆಯಲ್ಲಿ ಗೀಜರ್‌ನಿಂದ ಹೊರಬರುವ ಕಾರ್ಬನ್ ಮಾನಾಕ್ಸೈಡ್ ದೇಹದೊಳಗೆ ಹೋಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.
ಇನ್ನಷ್ಟು ಸುದ್ದಿಗಳು:
ಗೋಮಾಂಸ ತಿನ್ನುವವರ ಜೊತೆಗೆ ನಾವು ಡಿ ಎನ್ ಎ ಹಂಚಿಕೊಳ್ಳುವುದಿಲ್ಲ | ವಿಎಚ್ ಪಿ ಸದಸ್ಯೆ ಸಾಧ್ವಿ ಪ್ರಾಚಿ
ಮಗಳು ಮೃತಪಟ್ಟು ಒಂದು ಗಂಟೆಯೊಳಗೆ ತಂದೆಯೂ ಸಾವು!