ನದಿ ದಂಡೆಯಲ್ಲಿ ಯುವಕರ ಬಟ್ಟೆ ಪತ್ತೆಯಾಯ್ತು, ಆದರೆ ಯುವಕರ ಸ್ಥಿತಿ ಏನಾಗಿತ್ತು ಗೊತ್ತಾ? - Mahanayaka
11:33 PM Wednesday 5 - February 2025

ನದಿ ದಂಡೆಯಲ್ಲಿ ಯುವಕರ ಬಟ್ಟೆ ಪತ್ತೆಯಾಯ್ತು, ಆದರೆ ಯುವಕರ ಸ್ಥಿತಿ ಏನಾಗಿತ್ತು ಗೊತ್ತಾ?

dress
20/04/2021

ಕಡಬ: ನದಿಯ ದಂಡೆಯ ಕಲ್ಲಿನ ಮೇಲೆ ಯುವಕರಿಬ್ಬರ ಬಟ್ಟೆಗಳು ಪತ್ತೆಯಾದವು ಆದರೆ, ಯುವಕರೇ ಪತ್ತೆಯಾಗಲಿಲ್ಲ. ಎಪ್ರಿಲ್ 19ರಂದು ದಕ್ಷಿಣ ಕನ್ನಡ ಜಿಲ್ಲೆಯ  ಕಡಬದ ಇಚಿಲಂಪಾಡಿಯಲ್ಲಿ ನದಿಗೆ ಸ್ನಾನಕ್ಕೆ ಇಳಿದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ನಡೆದಿದೆ.

ನೆಲ್ಯಾಡಿ ಶಾಂತಿಬೆಟ್ಟು ನಿವಾಸಿ ಉಮ್ಮರ್ ಎಂಬವರ 20 ವರ್ಷ ವಯಸ್ಸಿನ ಪುತ್ರ ಝಾಕಿರ್ ಹಾಗೂ ಅವರ ಸಹೋದರಿಯ ಪುತ್ರ  ಉಪ್ಪಿನಂಗಡಿ ಸರಳಿಕಟ್ಟೆ ನಿವಾಸಿ ಸಿನಾನ್ ಮೃತಪಟ್ಟ ಯುವಕರಾಗಿದ್ದಾರೆ.

ಇಚಿಲಂಪಾಡಿ ಸೇತುವೆ ಸಮೀಪ ನದಿಯ ದಂಡೆಯ ಮೇಲೆ ತಮ್ಮ ಬಟ್ಟೆಗಳನ್ನು ಬಿಚ್ಚಿಟ್ಟು ನದಿಗೆ ಸ್ನಾನ ಮಾಡಲು ಯುವಕರು ಇಳಿದಿದ್ದಾರೆ. ನೀರಿನ ಆಳ ತಿಳಿಯದೇ ಇಳಿದ ಇಬ್ಬರು ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದೇ ಜಾಗದಲ್ಲಿ ಮರಳುಗಳನ್ನು ತೆಗೆಯಲಾಗುತ್ತಿತ್ತು ಎಂದು ಕೆಲವು ಸ್ಥಳೀಯ ಮಾಧ್ಯಮಗಳು ಶಂಕೆ ವ್ಯಕ್ತಪಡಿಸಿವೆ.

ಯುವಕರಿಬ್ಬರು ನದಿಗೆ ಇಳಿದು ನಾಪತ್ತೆಯಾಗಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರು ನೀರಿಗೆ ಇಳಿದು ಇಬ್ಬರ ಮೃತದೇಹಗಳನ್ನು ಕೂಡ ನೀರಿನಿಂದ ಮೇಲೆತ್ತಿದ್ದಾರೆ. ಘಟನಾ ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ