ಸ್ನಾನಕ್ಕೆ ಹೋಗಿ 2 ಗಂಟೆಯಾದರೂ ವಿದ್ಯಾರ್ಥಿನಿ ಮರಳಿ ಬರಲಿಲ್ಲ | ಬಾತ್ ರೂಮ್ ಬಾಗಿಲು ಮುರಿದು ನೋಡಿದಾಗ ಕಾದಿತ್ತು ಶಾಕ್ - Mahanayaka
8:01 PM Wednesday 11 - December 2024

ಸ್ನಾನಕ್ಕೆ ಹೋಗಿ 2 ಗಂಟೆಯಾದರೂ ವಿದ್ಯಾರ್ಥಿನಿ ಮರಳಿ ಬರಲಿಲ್ಲ | ಬಾತ್ ರೂಮ್ ಬಾಗಿಲು ಮುರಿದು ನೋಡಿದಾಗ ಕಾದಿತ್ತು ಶಾಕ್

sampada
06/09/2021

ಬೆಂಗಳೂರು: ಗ್ಯಾಸ್ ಗೀಸರ್ ಲೀಕ್ ಆಗಿ 23 ವರ್ಷ ವಯಸ್ಸಿನ ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆದಿದ್ದು, ಸ್ನಾನಕ್ಕೆ ತೆರಳಿದ ವಿದ್ಯಾರ್ಥಿನಿ  ಬಾತ್ ರೂಮ್ ನಲ್ಲಿಯೇ ಸಾವನ್ನಪ್ಪಿದ್ದಾಳೆ.

ಸೆ.4ರಂದು ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು, ಎಂಬಿಬಿಎಸ್ ವಿದ್ಯಾರ್ಥಿನಿ ಸಂಪದ ಮೃತಪಟ್ಟ ವಿದ್ಯಾರ್ಥಿನಿ ಎಂದು ವರದಿಯಾಗಿದ್ದು,  ಮಧ್ಯಾಹ್ನ 12:30ರ ವೇಳೆ ಸ್ನಾನಕ್ಕೆ ವಿದ್ಯಾರ್ಥಿನಿ ತೆರಳಿದ್ದಳು. ಸ್ನಾನಕ್ಕೆ ಹೋಗಿ 2 ಗಂಟೆಗಳು ಕಳೆದರೂ ವಿದ್ಯಾರ್ಥಿನಿ ಬಾತ್ ರೂಮ್ ನಿಂದ ಹೊರ ಬಾರದೇ ಇದ್ದಾಗ ಪೋಷಕರು ಗಾಬರಿಯಾಗಿದ್ದಾರೆ.

ತಕ್ಷಣವೇ ಬಾಗಿಲು ಬಡಿದರೂ, ವಿದ್ಯಾರ್ಥಿನಿ ಬಾಗಿಲು ತೆರೆಯಲಿಲ್ಲ. ಹೀಗಾಗಿ ಕುಟುಂಬಸ್ಥರು ಬಾತ್ ರೂಮ್ ಬಾಗಿಲು ಮುರಿದು ನೋಡಿದಾಗ ವಿದ್ಯಾರ್ಥಿನಿ ಕುಸಿದು ಬಿದ್ದಿರುವುದು ಕಂಡು ಬಂದಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವಿದ್ಯಾರ್ಥಿನಿ ಅದಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಯಾವಾಗಲೂ ಗೀಸರ್ ಆನ್ ಮಾಡಿ ಬಾತ್ ರೂಮ್ ನ ಬಾಗಿಲು ಮುಚ್ಚಿ ಸ್ನಾನ ಮಾಡಬಾರದು. ಸ್ನಾನಕ್ಕಿಂತ ಮೊದಲೇ ಗೀಸರ್ ಆನ್ ಮಾಡಿ ನೀರು ಬಿಸಿಯಾದ ಬಳಿಕ ಗೀಸರ್ ಆಫ್ ಮಾಡಿದ ಬಳಿಕವೇ ಸ್ನಾನ ಮಾಡಲು ತೆರಳಬೇಕು. ಗೀಸರ್ ನಿಂದ ಕಾರ್ಬನ್ ಮೋನಾಕ್ಸೈಡ್ ಲೀಕ್ ಆಗಿ ಸಾವನ್ನಪ್ಪಿರುವ ಹಲವಾರು ಘಟನೆಗಳಿದ್ದರೂ, ಜನರು ಎಚ್ಚೆತ್ತುಕೊಳ್ಳುತ್ತಿಲ್ಲ.

ಇನ್ನಷ್ಟು ಸುದ್ದಿಗಳು…

ಕೊವಿಡ್ ಲಸಿಕೆ ಪಡೆದ ಬಳಿಕ ನಮ್ಮ ಮಗ ಮೃತಪಟ್ಟ | ಪೋಷಕರಿಂದ ಗಂಭೀರ ಆರೋಪ

ಪೆರಿಯಾರ್ ಜನ್ಮದಿನವನ್ನು ಸಾಮಾಜಿಕ ನ್ಯಾಯದಿನವನ್ನಾಗಿ ಆಚರಿಸಲು ನಿರ್ಧಾರ | ಎಂ.ಕೆ.ಸ್ಟ್ಯಾಲಿನ್ 

ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಬೆಳಗಾವಿ ಬಿಜೆಪಿ ತೆಕ್ಕೆಗೆ, ಧಾರವಾಡ, ಕಲಬುರ್ಗಿ ಅತಂತ್ರ

ಗಣೇಶನ ಹಬ್ಬದಂದು ಗಬ್ಬೆದ್ದು ನಾರಲಿದೆ ಬೆಂಗಳೂರು! | ಸ್ವಚ್ಛತಾ ಸೈನಿಕರು ಕೊಟ್ರು ನೋಡಿ ಶಾಕ್!

ಪೊಲೀಸರ ಎದುರೇ ಕ್ರೈಸ್ತ ಪಾದ್ರಿ ಸೇರಿದಂತೆ ಮೂವರಿಗೆ ಹಲ್ಲೆ ನಡೆಸಿದ ಬಲಪಂಥೀಯರು!

8 ತಿಂಗಳ ಗರ್ಭಿಣಿ ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟುಕೊಂದ ತಾಲಿಬಾನಿಗರು!

ಮೂವರು ವಿದ್ಯಾರ್ಥಿನಿಯರಿಗೆ, ನೀವು ಧರಿಸಿರುವ ಉಡುಪು ಕಳಚಿ ಎಂದ 50 ವರ್ಷದ ಪ್ರಾಂಶುಪಾಲ!

ಇತ್ತೀಚಿನ ಸುದ್ದಿ