ಸ್ನೇಹಿತನ ತಂಗಿ ಜತೆ ಫೋನ್ ನಲ್ಲಿ ಮಾತನಾಡುತ್ತಿದ್ದ ಯುವಕನ ದುರಂತ ಅಂತ್ಯ! - Mahanayaka
3:10 AM Wednesday 11 - December 2024

ಸ್ನೇಹಿತನ ತಂಗಿ ಜತೆ ಫೋನ್ ನಲ್ಲಿ ಮಾತನಾಡುತ್ತಿದ್ದ ಯುವಕನ ದುರಂತ ಅಂತ್ಯ!

hasana news
16/03/2022

ಹಾಸನ: ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಆತನ ಸ್ನೇಹಿತರ ಕುಟುಂಬಸ್ಥರು ಕೊಲೆ ಮಾಡಿರುವ ಘಟನೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಗ್ರಾಮದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

ಅನಿಲ್ ರಾಜ್ (22)  ಹತ್ಯೆಗೀಡಾದ ಯುವಕನಾಗಿದ್ದು, ಸೋಮವಾರ ರಾತ್ರಿ ಸ್ನೇಹಿತ ಪ್ರಜ್ವಲ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಅನಿಲ್‌ರಾಜ್ ಹಾಗೂ ಸ್ನೇಹಿತ ಪ್ರಸಾದ್ ಭಾಗಿಯಾಗಿದ್ದರು.

ಪಾರ್ಟಿಯಿಂದ ವಾಪಾಸ್ ಆಗುತ್ತಿದ್ದ ಅನಿಲ್‌ ರಾಜ್‌ ನನ್ನು ಪ್ರಸಾದ್ ಕುಟುಂಬಸ್ಥರು ಅಡ್ಡಗಟ್ಟಿದ್ದಾರೆ. ಆರೋಪಿ ಪ್ರಸಾದ್​ ತಂಗಿ ಜೊತೆ ಅನಿಲ್‌ ರಾಜ್ ಫೋನ್‌ ನಲ್ಲಿ ಮಾತನಾಡುತ್ತಿದ್ದ ವಿಷಯವಾಗಿ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ಅತಿರೇಕಕ್ಕೇರಿದ್ದು, ಅನಿಲ್‌ ರಾಜ್ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಅನಿಲ್‌ ರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಆರೋಪಿಗಳು ಅನಿಲ್ ಮೃತದೇಹವನ್ನು ತಮ್ಮ ಮನೆಯ ಹಿಂಭಾಗದಲ್ಲಿ ಹೂತು ಹಾಕಿದ್ದರು ಎನ್ನಲಾಗಿದೆ .

ಪಾರ್ಟಿಗೆಂದು ತೆರಳಿದ್ದ ಅನಿಲ್ ತಡ ರಾತ್ರಿಯಾದರೂ ಮನೆಗೆ ಬಾರದ  ಹಿನ್ನೆಲೆಯಲ್ಲಿ ಆತನ ಪೋಷಕರು ಹುಡುಕಾಡಿದ್ದು,  ಪ್ರಸಾದ್ ಮನೆಯ ಸಮೀಪ  ಹುಡುಕಿದಾಗ.  ಶವ ಹೊತ್ತಿದ್ದ ಪ್ರದೇಶದಲ್ಲಿ ಮೃತನ ಕೈಬೆರಳುಗಳು ಹೊರಗೆ ಕಂಡು ಬಂದಿದ್ದು,  ತಕ್ಷಣವೇ ಅನಿಲ್ ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧಿಸಿದಂತೆ  ಆರೋಪಿಗಳಾದ ಪ್ರಸಾದ್, ಜಯಲಕ್ಷ್ಮಿ, ಪ್ರಿಯ, ಮತ್ತು ಮೋಹನ್ ​ನನ್ನು ಸಕಲೇಶಪುರ ಗ್ರಾಮಾಂತರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಜರಗಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ವಿದ್ಯಾರ್ಥಿನಿ

12ರಿಂದ 15 ವರ್ಷದ ಮಕ್ಕಳಿಗೆ ಇಂದಿನಿಂದ ಕೊವಿಡ್ ಲಸಿಕಾ ಅಭಿಯಾನ

ದೆಹಲಿಯ ಹೊರಗೆ ಮೊದಲ ಬಾರಿಗೆ AAP ಸಿಎಂ;  ಇಂದು ಪಂಜಾಬ್ ನಲ್ಲಿ ಭಗವಂತ್ ಮಾನ್ ಅಧಿಕಾರಕ್ಕೆ

ಹಿಜಾಬ್​ ತೀರ್ಪು: ತರಗತಿ ಬಹಿಷ್ಕರಿಸಿದ ಮುಸ್ಲಿಂ ವಿದ್ಯಾರ್ಥಿನಿಯರು

ಹಿಜಾಬ್ ವಿವಾದ: ನಾವು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ; ಸಿ.ಎಂ.ಇಬ್ರಾಹಿಂ

ಇತ್ತೀಚಿನ ಸುದ್ದಿ