ಮುಂಬೈ: ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ!
ಮುಂಬೈ: ಕೆಲವೇ ದಿನಗಳ ಹಿಂದೆ 34 ವರ್ಷ ವಯಸ್ಸಿನ ಮಹಿಳೆಯನ್ನು ಅತ್ಯಾಚಾರ ಗೈದು ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣ ಇನ್ನೂ ಜೀವಂತವಿರುವಾಗಲೇ ಮಹಾರಾಷ್ಟ್ರದಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದ್ದು, 15 ವರ್ಷ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಲಾಗಿದೆ.
ಬಾಲಕಿ ಶಿರಡಿಯಿಂದ ವಾಪಸ್ ಬಂದಿದ್ದು, ಇಲ್ಲಿನ ಭಿವಂದಿ ಬೈಪಾಸ್ ಬಳಿ ರೈಲಿನಿಂದ ಇಳಿಸಿದ್ದಾಳೆ. ಬಳಿಕ ಕಲ್ಯಾಣ್ ನಗರಕ್ಕೆ ತೆರಳಿ ಉಲ್ಲಾಸನಗರಕ್ಕೆ ಹೋಗುವ ಲೋಕಲ್ ರೈಲನ್ನು ಏರಿದ್ದಾಳೆ. ಉಲ್ಲಾಸನಗರದಲ್ಲಿ ರಾತ್ರಿ 9 ಗಂಟೆಗೆ ಆಕೆಯ ಇಬ್ಬರು ಸ್ನೇಹಿತರು ಆಕೆಗೆ ಸಿಕ್ಕಿದ್ದಾರೆ. ಹೀಗಾಗಿ ಮೂವರು ಕೂಡ ಸ್ಕೈವಾಕ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವ್ಯಕ್ತಿಯೋರ್ವ ಬಂದಿದ್ದು, ಆತನ ಕೈಯಲ್ಲಿ ಸುತ್ತಿಗೆ ಇದ್ದು, ಸುತ್ತಿಗೆಯಿಂದ ಬೀಸಿ ಬಾಲಕಿಯ ಸ್ನೇಹಿತರನ್ನು ಹೆದರಿಸಿದ್ದಾನೆ. ಈ ವೇಳೆ ಹೆದರಿದ ಆಕೆಯ ಸ್ನೇಹಿತರು ಸ್ಥಳದಿಂದ ಓಡಿ ಹೋಗಿದ್ದಾರೆ. ಈ ವೇಳೆ ಆರೋಪಿಯು ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಪೊಲೀಸರ ಪ್ರಕಾರ ರೈಲ್ವೆ ಸ್ಟೇಷನ್ ಆವರಣದಲ್ಲಿರುವ ರೈಲ್ವೆ ವಸತಿ ಗೃಹದಲ್ಲಿ ಬಾಲಕಿಯ ಮೇಲೆ ಆರೋಪಿ ಅತ್ಯಾಚಾರ ನಡೆಸಿದ್ದಾನೆನ್ನಲಾಗಿದೆ. ರಾತ್ರಿಯಿಡೀ ಆರೋಪಿಯ ಅತ್ಯಾಚಾರದಿಂದ ಬಹಳಷ್ಟು ಸಂಕಷ್ಟಪಟ್ಟ ಬಾಲಕಿ ಬೆಳಗ್ಗೆ ಹೇಗೋ ಅಲ್ಲಿಂದ ಪರಾರಿಯಾಗಿ ಬಳಿಕ ಆಕೆಯ ಸ್ನೇಹಿತೆಗೆ ಸುದ್ದಿ ಮುಟ್ಟಿದ್ದಾಳೆ. ಆಕೆಯ ಸ್ನೇಹಿತೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎಂದು ತಿಳಿದು ಬಂದಿದೆ.
ಬಾಲಕಿ ಒಂದೆಡೆ ಅತ್ಯಾಚಾರಕ್ಕೊಳಪಟ್ಟು ಸಂಕಷ್ಟದಲ್ಲಿದ್ದರೆ, ತಕ್ಷಣ ಸ್ಪಂದಿಸಬೇಕಾದ ಪೊಲೀಸರು, ಈ ಕೇಸ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಇನ್ನಷ್ಟು ಸುದ್ದಿಗಳು…
ಕೇವಲ ಐದು ರೂಪಾಯಿಗಾಗಿ ಬುಡಕಟ್ಟು ಸಮುದಾಯದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!
ಮಮತಾ ಬ್ಯಾನರ್ಜಿಯ ಸಾಧನೆಯನ್ನು ತನ್ನ ಸಾಧನೆ ಎಂದು ಜಾಹೀರಾತು ನೀಡಿದ ಯೋಗಿ ಆದಿತ್ಯನಾಥ್
ಗಣೇಶೋತ್ಸವದ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಲೇ ಪ್ರಾಣ ಬಿಟ್ಟ ಯುವಕ!
ನಸುಕಿನ ವೇಳೆ ಕಳ್ಳರಂತೆ ಬಂದು ಜಿಲ್ಲಾಡಳಿತ ದೇಗುಲ ತೆರವು ಮಾಡುತ್ತಿದೆ | ಸಂಸದ ಪ್ರತಾಪ್ ಸಿಂಹ ಆಕ್ರೋಶ
ಹೇಯ ಕೃತ್ಯ: 6 ವರ್ಷದ ಮಗುವಿನ ಮೇಲೆ ಚಿಕ್ಕಪ್ಪನಿಂದಲೇ ಲೈಂಗಿಕ ದೌರ್ಜನ್ಯ