ತಿಂಡಿ ತರುತ್ತೇನೆ ಎಂದು ಹೋದ ಪತ್ನಿ ಮರಳಿ ಬರಲಿಲ್ಲ: ಪತಿಯಿಂದ ದೂರು - Mahanayaka
11:03 AM Thursday 12 - December 2024

ತಿಂಡಿ ತರುತ್ತೇನೆ ಎಂದು ಹೋದ ಪತ್ನಿ ಮರಳಿ ಬರಲಿಲ್ಲ: ಪತಿಯಿಂದ ದೂರು

missing
11/09/2022

ಮಂಗಳೂರು: ಸಾಮಾಜಿಕ‌ ಕಾರ್ಯಕರ್ತೆಯೊಬ್ಬರು ನಾಪತ್ತೆಯಾಗಿರುವ ಘಟನೆ ಮಂಗಳೂರಲ್ಲಿ ನಡೆದಿದೆ.

ರೋಗಿಗಳಿಗೆ ಸೇವೆ ಸಲ್ಲಿಸುವ ಸಾಮಾಜಿಕ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಜೇಶ್ವರಿ (36) ಎಂಬುವವರು ಸೆಪ್ಟೆಂಬರ್ 8ರಿಂದ ಕಾಣೆಯಾದ ಬಗ್ಗೆ ಅವರ ಪತಿ ರಾಜಕುಮಾರ ಎಂಬುವವರು ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ದೂರಿನಲ್ಲಿ ತಾನು ಜೆಸಿಬಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದೀನಿ. ನನ್ನ ಪತ್ನಿ ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. ಸೆಪ್ಟೆಂಬರ್ 8ರಂದು ರಾತ್ರಿ 7:30ಕ್ಕೆ ಮಂಗಳೂರು ನಗರದ ಸ್ಟೇಟ್‌’ಬ್ಯಾಂಕ್ ಹತ್ತಿರದ ಮೀನು ಮಾರ್ಕೆಟ್‌’ಗೆ ಹೆಂಡತಿ ಜೊತೆ ಹೋಗಿದ್ದೆ. ಮಕ್ಕಳಿಗೆ ತಿಂಡಿ ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋದ ಪತ್ನಿ ಮರಳಿ ಬಂದಿಲ್ಲ. ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಮೊಬೈಲನ್ನು ತನ್ನ ಬ್ಯಾಗಿನಲ್ಲಿ ಹಾಕಿ ಹೋಗಿರುತ್ತಾಳೆ ಎಂದು ಅವರು ತಿಳಿಸಿದ್ದಾರೆ.

5 ಅಡಿ ಎತ್ತರದ, ಬಿಳಿ ಮೈಬಣ್ಣದ ರಾಜೇಶ್ವರಿ ಪಿಂಕ್ ಬಣ್ಣದ ಚೂಡಿದಾರ್, ಲೆಗ್ಗಿನ್ಸ್ ಮತ್ತು ಹಳದಿ ಬಣ್ಣದ ಶಾಲ್ ಧರಿಸಿರುತ್ತಾಳೆ. ಕನ್ನಡ, ತುಳು, ಮಲೆಯಾಳಂ, ಹಿಂದಿ ಭಾಷೆ ಮಾತನಾಡುತ್ತಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರಾಜಕುಮಾರ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ