ಸೋಜಿಗಾದ ಸೂಜಿ ಮಲ್ಲಿಗೆ ಹಾಡು ಹಾಡಿದ ಮುಸ್ಲಿಮ್ ವಿದ್ಯಾರ್ಥಿನಿಗೆ ಚಪ್ಪಾಳೆಯ ಸುರಿಮಳೆ

ಚಾಮರಾಜನಗರ: ಸೋಜಿಗದ ಸೂಜಿ ಮಲ್ಲಿಗೆ, ಮಾದೇವಾ ನಿಮ್ಮ ಮಂಡೆ ಮ್ಯಾಗೆ ದುಂಡು ಮಲ್ಲಿಗೆ ಎಂದು ಮಾದಪ್ಪನ ಹಾಡಿ ಮುಸ್ಲಿಂ ಯುವತಿ ಗಮನ ಸೆಳೆದ ಘಟನೆ ಚಾಮರಾಜನಗರದಲ್ಲಿ ನಡೆಯಿತು.
ಭಾರತೀಯ ಪರಿವರ್ತನ ಸಂಘ(BPS) ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಉಮ್ಮೆ ಬಸೀರಾ ಮಾದಪ್ಪನ ಹಾಡು ಹಾಡಿದ್ದಾರೆ.
ವಿದ್ಯಾರ್ಥಿನಿಯ ಹಾಡಿಗೆ ಸಭಿಕರು ಚಪ್ಪಾಳೆ, ಸಿಳ್ಳೆಗಳ ಸುರಿಮಳೆ ಸುರಿಸಿದರು. ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಗಾರದಲ್ಲಿ ಮುಸ್ಲಿಂ ಯುವತಿಯ ಮಾದಪ್ಪನ ಹಾಡು ಎಲ್ಲರ ಗಮನ ಸೆಳೆಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw